ಕೊಡೆರ್ಮಾ (ಜಾರ್ಖಂಡ್): ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಜಿಲೆಟಿನ್ ಸ್ಫೋಟದ ಬೆನ್ನಲ್ಲೇ ಇದೀಗ ಜಾರ್ಖಂಡ್ನಲ್ಲಿ ಅಕ್ರಮ ಗಣಿಗಾರಿಕೆ ವೇಳೆ ಮತ್ತೊಂದು ಅವಘಡ ಸಂಭವಿಸಿದೆ.
ಜಾರ್ಖಂಡ್: ಅಕ್ರಮ ಗಣಿಗಾರಿಕೆ ವೇಳೆ ನಾಲ್ವರ ದುರ್ಮರಣ - mica mining
11:49 January 22
ಜಾರ್ಖಂಡ್ನ ಕೊಡರ್ಮಾ ಜಿಲ್ಲೆಯ ಅಭ್ರಕದ ಗಣಿಯಲ್ಲಿ ಕಾರ್ಮಿಕರ ಮೇಲೆ ಮಣ್ಣು ಕುಸಿದು ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.
ಜಾರ್ಖಂಡ್ನ ಕೊಡರ್ಮಾ ಜಿಲ್ಲೆಯ ಫುಲ್ವೇರಿಯಾ ಪ್ರದೇಶದಲ್ಲಿರುವ ಅಭ್ರಕದ ಗಣಿಯಲ್ಲಿ ಕಾರ್ಮಿಕರ ಮೇಲೆ ಮಣ್ಣು ಕುಸಿದು ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ನಿನ್ನೆ ಸಂಜೆಯೇ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮೃತದೇಹಗಳು ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣ: ಶಿವಮೊಗ್ಗಕ್ಕೆ ಆಗಮಿಸಿದ ಬಾಂಬ್ ಸ್ಕ್ವಾಡ್ ತಂಡಗಳು!
ಮಣ್ಣಿನಡಿ ಇನ್ನೂ ಕೆಲವರು ಸಿಲಿಕಿದ್ದು, ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
ನಿನ್ನೆ ರಾತ್ರಿ ಶಿವಮೊಗ್ಗದ ಅಬ್ಬಲಗೆರೆಯ ಹುಣಸೋಡು ಗ್ರಾಮದ ಕಲ್ಲುಕ್ವಾರಿಯಲ್ಲಿ ಜಿಲೆಟಿನ್ ತುಂಬಿದ್ದ ಲಾರಿ ಸ್ಫೋಟಿಸಿ ಎಂಟು ಕಾರ್ಮಿಕರು ಬಲಿಯಾಗಿದ್ದರು.