ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿದ್ದ ಕಾರು ಚಾಲಕನೊಬ್ಬ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತರೀಕೆರೆ ಬಳಿ ಈ ಘಟನೆ ನಡೆದಿದೆ. ನಾಗರಾಜ್ (45) ಮೃತ ಬೈಕ್ ಸವಾರ.
ಹೋಳಿ ಪಾರ್ಟಿಯಲ್ಲಿ ಕುಡಿದು ಬರುತ್ತಿದ್ದ ಯುವಕರಿಂದ ಬೈಕ್ಗೆ ಡಿಕ್ಕಿ: ಸವಾರ ಸಾವು - Accident Between Car and Bike
ಮದ್ಯಪಾನ ಮಾಡಿ ಕಾರು ಚಲಾಯಿಸಿಕೊಂಡು ಬಂದ ಯುವಕರ ತಂಡವೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ತರೀಕೆರೆ ಬಳಿ ನಡೆದಿದೆ.

ಕುಡಿದ ಮತ್ತಿನಲ್ಲಿದ್ದ ಯುವಕರ ಕಾರು ನಗರದ ಎಪಿಎಂಸಿ ಬಳಿ ಬರುತ್ತಿದ್ದ ಬೈಕ್ ಸವಾರನಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಇವರ ಕಾರು ಪಕ್ಕದಲ್ಲಿದ್ದ ಬ್ರಿಡ್ಜ್ ಹಾಗೂ ಮತ್ತೊಂದು ಇನ್ನೋವಾ ಕಾರಿಗೂ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ ಇನ್ನೋವಾ ಕಾರಿನಲ್ಲಿದ್ದ ಇಬ್ಬರು ಸವಾರರು ಗಾಯಗೊಂಡಿದ್ದು ಅವರನ್ನು ತರೀಕೆರೆಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮದ್ಯಪಾನ ಮಾಡಿದ್ದ ಯುವಕರು ಹೋಳಿ ಸಂಭ್ರಮ ಮುಗಿಸಿಕೊಂಡು ವಾಪಾಸ್ ಆಗಮಿಸುತ್ತಿದ್ದರು.
ತರೀಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.