ಕರ್ನಾಟಕ

karnataka

ETV Bharat / jagte-raho

ಟ್ರೇಡ್ ಲೈಸೆನ್ಸ್ ನೀಡಲು ಲಂಚ ಪಡೆಯುತ್ತಿದ್ದ ಆರೋಪ... ಹೆಲ್ತ್ ಇನ್ಸ್​ಸ್ಪೆಕ್ಟರ್ ಎಸಿಬಿ ಬಲೆಗೆ - undefined

ಟ್ರೇಡ್ ಲೈಸನ್ಸ್ ನೀಡಲು ವ್ಯಕ್ತಿವೋರ್ವನಿಂದ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಹೆಲ್ತ್ ಇನ್ಸ್​ಸ್ಪೆಕ್ಟರ್​ ಹುಳಿಮಾವು ಬಳಿಯ ಶಾಂತಿನಿಕೇತನ್ ಲೇಔಟ್ ಬಳಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಹೆಲ್ತ್ ಇನ್ಸ್​ಸ್ಪೆಕ್ಟರ್ ಎಸಿಬಿ ಬಲೆಗೆ

By

Published : Jun 4, 2019, 5:25 AM IST

ಬೆಂಗಳೂರು: ಟ್ರೇಡ್ ಲೈಸನ್ಸ್ ನೀಡಲು ವ್ಯಕ್ತಿವೋರ್ವನಿಂದ ಹತ್ತು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ಆರೋಪ ಮೇಲೆ ಹೆಲ್ತ್ ಇನ್ಸ್​ಸ್ಪೆಕ್ಟರ್ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬೊಮ್ಮನಹಳ್ಳಿಯ ಪ್ರದೀಪ್ ಕುಮಾರ್ ಎಸಿಬಿ ಬಲೆಗೆ ಸಿಕ್ಕಿಬಿದ್ದಿರುವ ಅಧಿಕಾರಿ. ಹುಳಿಮಾವು ಬಳಿಯ ಶಾಂತಿನಿಕೇತನ್ ಲೇಔಟ್ ಬಳಿ ಎಂಟು ಸಾವಿರ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಪರವಾನಗಿ ನೀಡಲು ಪ್ರದೀಪ್​ ಕುಮಾರ್​ 10 ಸಾವಿರ ರೂ. ಲಂಚ ಕೇಳಿದ್ದರು ಎನ್ನಲಾಗ್ತಿದೆ. 8 ಸಾವಿರ ನೀಡುವುದಾಗಿ ಪಾರ್ಲರ್ ಮಾಲೀಕರು ಹೇಳಿ ಎಸಿಬಿಗೆ ದೂರು ನೀಡಿದ್ದರು. ಸದ್ಯ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details