ಕರ್ನಾಟಕ

karnataka

ETV Bharat / jagte-raho

ಪ್ರೀತಿಗೆ ನಕಾರ... ಯುವತಿಯ ಕತ್ತು ಸೀಳಿ ಕೊಂದ ಪಾಗಲ್ ಪ್ರೇಮಿಯ ಗತಿ ಏನಾಯ್ತು? - A young woman murdered in Doddaballapur

ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಕುತ್ತಿಗೆ ಕೊಯ್ದು ಕೊಂದು ಪರಾರಿಯಾಗಿದ್ದ ಆರೋಪಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

A young woman murdered by strangulation

By

Published : Nov 15, 2019, 4:15 AM IST

ದೊಡ್ಡಬಳ್ಳಾಪುರ:ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆಕುರಿ ಮೇಯಿಸುತ್ತಿದ್ದ ವೇಳೆ ಯುವತಿಯನ್ನು ಕತ್ತು ಸೀಳಿ ಹತ್ಯೆ ಮಾಡಿರುವ ಘಟನೆ ತಾಲೂಕಿನ ಲಿಂಗನಹಳ್ಳಿ ಬಳಿ ನಡೆದಿದೆ.

ಇದನ್ನೂ ಓದಿ..ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಬಲಿಯಾದಳಾ ಈ ಬಾಲಕಿ...?

ನವೆಂಬರ್​ 12ರ ಮಧ್ಯಾಹ್ನ ತಾಲೂಕಿನ ಲಿಂಗನಹಳ್ಳಿಯಲ್ಲಿ ಯುವತಿ ಅಂಜಲಿ (20) ಹತ್ಯೆ ಮಾಡಲಾಗಿತ್ತು. ಪ್ರಕರಣ ಬೆನ್ನುಹತ್ತಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಗ್ರಾಮದ ಮಹೇಶ್ ಕುಮಾರ್ (23) ಎಂಬಾತನನ್ನು ಬಂಧಿಸಿದ್ದಾರೆ. ಅಂಜಲಿಯನ್ನು ಬಂಧಿತ ಆರೋಪಿ ಮಹೇಶ್​ ಪ್ರೀತಿಸುತ್ತಿದ್ದ ಎನ್ನಲಾಗುತ್ತಿದೆ. ಅಂಜಲಿಗೆ ತನ್ನ ಅತ್ತೆ ಮಗನ ಜೊತೆ ಮದುವೆ ನಿಶ್ಚಯವಾಗಿ ಮದುವೆಯ ಸಿದ್ಧತೆ ನಡೆಯುತ್ತಿತ್ತು. ಇದರಿಂದ ಕುಪಿತಗೊಂಡ ಮಹೇಶ್​​, ಯುವತಿಯನ್ನು ಕತ್ತು ಸೀಳಿ ಕೊಲೆಗೈದು ಪರಾರಿಯಾಗಿದ್ದ.

ಯುವತಿ ಕೊಲೆಯಾದ ಜಾಗ

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಡಿವೈಎಸ್ಪಿ ರಂಗಪ್ಪ ನೇತೃತ್ವದಲ್ಲಿ ಆರೋಪಿ ಬಂಧನಕ್ಕಾಗಿ ತಂಡ ರಚಿಸಲಾಯಿತು. ಖಚಿತ ಮಾಹಿತಿ ಮೇರೆಗೆ ಹೊಸಕೋಟೆ ಪಟ್ಟಣದ ಮಾಲೂರು ರಸ್ತೆಯಲ್ಲಿ ಆರೋಪಿಯನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ABOUT THE AUTHOR

...view details