ಕರ್ನಾಟಕ

karnataka

ETV Bharat / jagte-raho

ಒಡಹುಟ್ಟಿದವನಿಂದಲೇ ವಿಧವೆ ಸಹೋದರಿ ಮೇಲೆ 16 ವರ್ಷಗಳಿಂದ ಅತ್ಯಾಚಾರ! - ಗುಜರಾತ್​ನಲ್ಲಿ ಲೇಟೆಸ್ಟ್​ ಅಪರಾಧ ಸುದ್ದಿ

ಸಹೋದರ-ಸಹೋದರಿಯರ ಪವಿತ್ರ ಸಂಬಂಧಕ್ಕೆ ಕಳಂಕ ತರುವ ಘಟನೆ ಗುಜರಾತ್​ನ ರಾಜ್​ಕೋಟ್​ನಲ್ಲಿ ಬೆಳಕಿಗೆ ಬಂದಿದೆ. ಸಹೋದರಿಯ ಮೇಲೆಯೇ ವ್ಯಕ್ತಿಯೋರ್ವ ದುಷ್ಕೃತ್ಯವೆಸಗಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

representational image
ಪ್ರಾತಿನಿಧಿಕ ಚಿತ್ರ

By

Published : Oct 19, 2020, 1:06 PM IST

ರಾಜ್​​ಕೋಟ್ (ಗುಜರಾತ್):ವಿಧವೆ ಸಹೋದರಿಯ ಮೇಲೆ ವ್ಯಕ್ತಿಯೋರ್ವ ಪದೇ ಪದೇ ಅತ್ಯಾಚಾರವೆಸಗಿ ಪ್ರಾಣ ಬೆದರಿಕೆವೊಡ್ಡಿರುವ ಘಟನೆ ಗುಜರಾತ್​ನ ರಾಜ್​ಕೋಟ್​ ಜಿಲ್ಲೆಯ ಗೋಕುಲ್​ಧಾಮ್​ ಬಳಿಯ ಗೋಕುಲ್​ನಗರದಲ್ಲಿ ನಡೆದಿದೆ.

ಸುಮಾರು 16 ವರ್ಷಗಳಿಂದ ಸಹೋದರನೇ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜೊತೆಗೆ ಅತ್ಯಾಚಾರದ ಸುದ್ದಿಯನ್ನು ಬಾಯ್ಬಿಟ್ಟರೇ ಸಹೋದರಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ರಾಜ್​ಕೋಟ್​ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ದೂರನ್ನು ಆಧರಿಸಿ, ಧೋಲಾಕಿಯಾ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

16 ವರ್ಷಗಳ ಹಿಂದೆ ಸಂತ್ರಸ್ತೆಯ ಪತಿ ಸಾವನ್ನಪ್ಪಿದ್ದು, ಇದನ್ನೇ ನೆಪವಾಗಿಸಿಕೊಂಡ ಆಕೆಯ ಸಹೋದರ ಅತ್ಯಾಚಾರ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಆರೋಪಿ ವಿರುದ್ಧ ಐಪಿಸಿ 376, 506(2), 323ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details