ಕರ್ನಾಟಕ

karnataka

ETV Bharat / jagte-raho

ಗಂಡು ಮಗುವಿಲ್ಲದ ಕೊರಗು: ನಾಲ್ಕು ಹೆಣ್ಣುಮಕ್ಕಳ ತಂದೆ ಪತ್ನಿಯ ವೇಲ್​ನಿಂದ ಆತ್ಮಹತ್ಯೆ..! - ಹುಬ್ಬಳ್ಳಿಯಲ್ಲಿ ಅಪರಾಧ ಸುದ್ದಿ

ಹುಬ್ಬಳಿ ಗ್ರಾಮೀಣ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣವೊಂದು ದಾಖಲಾಗಿದ್ದು, ಗಂಡು ಮಕ್ಕಳಿಲ್ಲದ ಕಾರಣಕ್ಕೆ ತನ್ನ ಪತಿ ಆತ್ಮಹತ್ಯೆಮಾಡಿಕೊಂಡಿದ್ದಾನೆ ಎಂದು ಪತ್ನಿ ದೂರಿದ್ದಾಳೆ

suicide in hubli
ಗಂಡುಮಕ್ಕಳಿದ ಕೊರಗಿಗೆ ವ್ಯಕ್ತಿ ಆತ್ಮಹತ್ಯೆ

By

Published : Dec 29, 2020, 3:24 AM IST

ಹುಬ್ಬಳ್ಳಿ:ಗಂಡು ಮಕ್ಕಳಾಗಲಿಲ್ಲ ಎಂದು ಮನ ನೊಂದ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ತಾರಿಹಾಳ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:ಕೊಡಗು ಜಿಲ್ಲೆಯಲ್ಲಿ ಮುಂದುವರೆದ ಕಾಡಾನೆ ದಾಳಿ : ಸ್ಥಳದಲ್ಲೇ ವ್ಯಕ್ತಿ ಸಾವು

ದಾವಲಸಾಬ್ ಪೆಂಡಾರಿ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ನಾಲ್ಕು ಹೆಣ್ಣು ಮಕ್ಕಳಿಗೆ ತಂದೆಯಾಗಿದ್ದಾನೆ. ಗಂಡು ಮಗುವಾಗಲಿಲ್ಲ ಎಂಬ ವಿಚಾರಕ್ಕೆ ಪತ್ನಿಯ ಜೊತೆ ಆಗಾಗ ಜಗಳ ಮಾಡುತ್ತಿದ್ದು, ಭಾನುವಾರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಕುಡಿದ ಮತ್ತಿನಲ್ಲಿ ತನ್ನ ಪತ್ನಿಯ ವೇಲ್​ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಕುರಿತು ಪತ್ನಿ ಕಲುಸಂಬಿ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details