ಕರ್ನಾಟಕ

karnataka

ETV Bharat / jagte-raho

ಕೌಟುಂಬಿಕ ಕಲಹ: ಫೇಸ್​​​ಬುಕ್​​​ನಲ್ಲಿ​​ ಸೆಲ್ಫಿ ವಿಡಿಯೋ ಮೂಲಕ ವಿವಾಹಿತ ವ್ಯಕ್ತಿ ಆತ್ಮಹತ್ಯೆ ಯತ್ನ

ಕೌಟುಂಬಿಕ ಕಲಹದಿಂದಾಗಿ ವಿವಾಹಿತ ವ್ಯಕ್ತಿ ಫೇಸ್​​​ಬುಕ್​​ನಲ್ಲಿ ಸೆಲ್ಫಿ ವಿಡಿಯೋ ಮೂಲಕ ನೋವು ತೋಡಿಕೊಂಡು ರಂಗಸ್ವಾಮಿ ಎಂಬಾತ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ.

A married man attempts suicide via a selfie video on Facebook
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಗಸ್ವಾಮಿ

By

Published : Jan 14, 2020, 7:09 AM IST

ಕೆ.ಆರ್.ಪುರ (ಬೆಂಗಳೂರು): ಏಳು ವರ್ಷಗಳಿಂದ ಪ್ರೀತಿಸಿದ ಅವರಿಬ್ಬರು 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತ್ನಿಯ ಅದೊಂದು ನಿರ್ಧಾರಕ್ಕೆ ನೊಂದ ಪತಿ ಸೆಲ್ಫಿ ವಿಡಿಯೋ ಮೂಲಕ ಆತ್ಮಹತ್ಯೆಗೆ ಯತ್ನಿಸಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಫೇಸ್​​​ಬುಕ್​​ನಲ್ಲಿ ಸೆಲ್ಫಿ ವಿಡಿಯೋ ಮೂಲಕ ತನ್ನ ನೋವನ್ನು ತೋಡಿಕೊಂಡು ರಂಗಸ್ವಾಮಿ ಎಂಬಾತ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಮೂಲತಃ ಚನ್ನಪಟ್ಟಣದವರಾದ ರಂಗಸ್ವಾಮಿ ಅವರು ಬೆಂಗಳೂರಿನ ಕೆ.ಆರ್.ಪುರದ ಪ್ರಿಯದರ್ಶಿನಿ‌ ಲೇಔಟ್​​​​ನಲ್ಲಿ ನೆಲೆಸಿದ್ದರು.

ಸೋಮವಾರ ಮಧ್ಯಾಹ್ನ 12.30ರ ಸುಮಾರಿಗೆ ಫೇಸ್​​ಬುಕ್​ನಲ್ಲಿ ಈ ವಿಡಿಯೋ ನೋಡಿದ್ದ ರಂಗಸ್ವಾಮಿ ಅವರ ಪಕ್ಕದ ಮನೆಯ ಸ್ನೇಹಿತರು, ಕೂಡಲೇ ಬಂದು ನೋಡಿದಾಗ ಫ್ಯಾನ್​​​ಗೆ ನೇಣು ಬಿಗಿದುಕೊಂಡಿದ್ದ. ರಂಗಸ್ವಾಮಿ ಉಸಿರಾಡುತ್ತಿದ್ದದ್ದನ್ನು ಗಮನಿಸಿದ ಸ್ನೇಹಿತರು, ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಂಗಸ್ವಾಮಿ

ಇಷ್ಟಕ್ಕೂ ಏನಾಗಿತ್ತು?:ರಂಗಸ್ವಾಮಿ ಕೇಬಲ್ ವ್ಯವಹಾರ ಮಾಡುತ್ತಲೇ ಪತ್ನಿಯನ್ನು ಪೋಷಿಸುತ್ತಿದ್ದ. ಆದರೆ, ಆರು ತಿಂಗಳ ಹಿಂದೆ ಅವರಿಬ್ಬರ ನಡುವೆ ಕಲಹ ಏರ್ಪಟ್ಟಿತ್ತು. ಮೂರು ವರ್ಷಗಳಿಂದ ಸಂಪರ್ಕದಲ್ಲಿರದ ಪತ್ನಿಯ ಪೋಷಕರು, ಆ ಬಳಿಕ ಮನೆಗೆ ಬಂದು ಹೋಗುತ್ತಿದ್ದರು. ಅಂದಿನಿಂದ ಪತಿ-ಪತ್ನಿ ನಡುವೆ ವಿರಸ ಉಂಟಾಗಿತ್ತು. ಬಳಿಕ ಸೀಮಂತ ಮಾಡಿಸಬೇಕು ಎಂದು ಪೋಷಕರು ರಂಗಸ್ವಾಮಿ ಪತ್ನಿಯನ್ನು ತವರಿಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಪತ್ನಿ ಕರೆ ಮಾಡಿ ವಿಚ್ಛೇದನ ನೀಡುವುದಾಗಿ ತಿಳಿಸಿದ್ದರು.

ಇದೇ ವಿಚಾರವಾಗಿ ನೊಂದಿದ್ದ ರಂಗಸ್ವಾಮಿ ಖಿನ್ನತೆಗೆ ಒಳಗಾಗಿದ್ದ. ಪತ್ನಿಯನ್ನು ಬಿಟ್ಟು ಇರಲಾರೆ ಎಂದು ಬೆಂಗಳೂರಿನ ಜಯನಗರದಲ್ಲಿರುವ ತನ್ನ ಅಮ್ಮನಿಗೆ ಹೇಳಿದ್ದ. ಅಷ್ಟೇ ಅಲ್ಲದೆ, ಸಾಯುವುದಾಗಿ ಎರಡು ದಿನಗಳ ಹಿಂದೆಯೇ ಹೇಳಿದ್ದ. ಹಾಗೂ ಸೋಮವಾರ ಬೆಳಗ್ಗೆಯೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾನೆ. ಇಂತಹ ಕಟು ನಿರ್ಧಾರಕ್ಕೆ ಮುಂದಾಗಬೇಡ. ನಾವು ಈಗಲೇ ಮನೆಗೆ ಬರುತ್ತೇವೆ. ಪತ್ನಿಯ ಮನೆಯವರೊಂದಿಗೆ ಮಾತನಾಡಿ ಎಲ್ಲವನ್ನೂ ಸರಿಪಡಿಸುತ್ತೇವೆ ಎಂದು ತಾಯಿ ಬುದ್ದಿ ಮಾತು ಹೇಳಿದ್ದರು. ಪೋಷಕರು ಬರುವಷ್ಟರಲ್ಲಾಗಲೇ ಮಗ ಆಸ್ಪತ್ರೆಗೆ ದಾಖಲಾಗಿದ್ದ ಎನ್ನಲಾಗಿದೆ.

ABOUT THE AUTHOR

...view details