ಕರ್ನಾಟಕ

karnataka

ETV Bharat / jagte-raho

ನೇತ್ರಾವತಿ ಸೇತುವೆಯಿಂದ ಹಾರಿದ ಯುವಕನ ಮೃತದೇಹ ಪತ್ತೆ - A young man committed suicide

ಮಂಗಳೂರಿನ ಉಳ್ಳಾಲ ನೇತ್ರಾವತಿ ಸೇತುವೆಯಿಂದ ಯುವಕನೋರ್ವ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

A man committed suicide at mangalore
ನೇತ್ರಾವತಿ ಸೇತುವೆ

By

Published : Jan 3, 2020, 11:38 AM IST

ಮಂಗಳೂರು:ಉಳ್ಳಾಲ ನೇತ್ರಾವತಿ ಸೇತುವೆಯಿಂದ ಯುವಕನೋರ್ವ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಉಳ್ಳಾಲಬೈಲ್​ನ ನವೀಶ್ (28) ನೇತ್ರಾವತಿ ಸೇತುವೆಯಿಂದ ಹಾರಿದ ಯುವಕ.

ನೇತ್ರಾವತಿ ಸೇತುವೆ

ಮಂಗಳೂರಿನಲ್ಲಿ ಶಾಮಿಯಾನ ಕೆಲಸ‌ ಉದ್ಯೋಗ ಮಾಡುತ್ತಿರುವ ನವೀಶ್ ಇಂದು ಮುಂಜಾನೆ 6.30ರ ಸುಮಾರಿಗೆ ನದಿಗೆ ಹಾರಿದ್ದರು. ಬೈಕನ್ನು ನೇತ್ರಾವತಿ ಸೇತುವೆ ಬಳಿ ನಿಲ್ಲಿಸಿ ಹಾರಿದ್ದನ್ನು ಬೇರೆ ವಾಹನ ಸವಾರರು ಗಮನಿಸಿದ್ದರು.

ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯ ಈಜುಗಾರರು ಹಾರಿದ ವ್ಯಕ್ತಿಯ ಶೋಧ ಕಾರ್ಯ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದಾರೆ.

ABOUT THE AUTHOR

...view details