ಗುಂಟೂರು (ಆಂಧ್ರ ಪ್ರದೇಶ): ಕೇವಲ 50 ರೂಪಾಯಿಗಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಆಂಧ್ರ ಪದೇಶದ ಗುಂಟೂರು ಜಿಲ್ಲೆಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗುಂಟೂರಿನ ಸತ್ತಾನಪಲ್ಲಿ ಎಂಬಲ್ಲಿರುವ ಅಂಗಡಿಯೊಂದಕ್ಕೆ ಹಾಲು ಖರೀದಿಸಲು ಕೋಟೇಶ್ವರ್ ರಾವ್ ಎಂಬ ವ್ಯಕ್ತಿ ಬಂದಿದ್ದಾನೆ. ಈ ವೇಳೆ 50 ರೂ. ವಿಚಾರಕ್ಕೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬಾಜಿ ಹಾಗೂ ಕೋಟೇಶ್ವರ್ ನಡುವೆ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದ್ದು, ಕೋಟೇಶ್ವರ್ ಜೊತೆ ಇನ್ನಿಬ್ಬರು ಸೇರಿಕೊಂಡು ಬಾಜಿಯನ್ನು ಥಳಿಸಿದ್ದಾರೆ.