ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಗ್ರಾಮದಲ್ಲಿ 49 ಸಾವಿರ ರೂ. ಮೌಲ್ಯದ ಅಕ್ರಮ ಪಡಿತರ ಅಕ್ಕಿಯನ್ನು ಪೊಲೀಸರು ಜಪ್ತಿ ಮಾಡಿಕೊಂಡು ಓರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.
ಅಕ್ರಮ ಪಡಿತರ ಅಕ್ಕಿ ಮಾರಾಟ: ಓರ್ವ ಅರೆಸ್ಟ್ - Linfasuguru ration sale accused arrest news
ಗುರುಗುಂಟಾ, ಹಟ್ಟಿ ಸೇರಿದಂತೆ ಇತರೆಡೆ ಸಂತೆ ಮಾರುಕಟ್ಟೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಗುರಮಿಠಕಲ್ಗೆ ಬಂದು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
Hatti police station
ಅಮರಯ್ಯ ಬಂಧಿತ ಆರೋಪಿ. ಈತ ಗುರುಗುಂಟಾ, ಹಟ್ಟಿ ಸೇರಿದಂತೆ ಇತರೆಡೆ ಸಂತೆ ಮಾರುಕಟ್ಟೆಯಲ್ಲಿ ಪಡಿತರ ಅಕ್ಕಿ ಖರೀದಿಸಿ ಗುರಮಿಠಕಲ್ಗೆ ಬಂದು ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ಪೊಲೀಸ್ ಇನ್ಸ್‌ಪೆಕ್ಟರ್ ರಾಜಕುಮಾರ ವೈಜಂತ್ರಿ ನೇತೃತ್ವದಲ್ಲಿ ದಾಳಿ ನಡೆಸಿದ ತಂಡ, 50 ಕಿಲೋ ಗ್ರಾಂ ತೂಕದ 98 ಅಕ್ಕಿ ಪ್ಯಾಕೇಟ್ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.