ಬೆಂಗಳೂರು:ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಘಟನೆ ನಗರದ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ ಪ್ರಿಯಕರ: ಠಾಣೆ ಮೆಟ್ಟಿಲೇರಿದ ಯುವತಿ - ಮದುವೆಯಾಗುವುದಾಗಿ ಮೋಸ
ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬಳ ಜೊತೆಗೆ ಲೈಂಗಿಕ ಸಂಪರ್ಕ ಬೆಳೆಸಿದ ಯುವಕನೊಬ್ಬ ಆಕೆಗೆ ಮೋಸ ಮಾಡಿರುವ ಘಟನೆ ಆಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕಳೆದ ಎರಡು ವರ್ಷಗಳ ಹಿಂದೆ ಅಕ್ಷಯ್ ಎಂಬಾತ ಪಾಂಡಿಚೇರಿಗೆ ಪ್ರವಾಸ ಹೋಗಿದ್ದ ವೇಳೆ ಯುವತಿಯೊಬ್ಬಳನ್ನು ಪರಿಚಯ ಮಾಡಿಕೊಂಡಿದ್ದ. ಮೊದಲ ಬಾರಿಗೆ ಸ್ನೇಹಿತರಾಗಿದ್ದ ಇವರು ದಿನಕಳೆದಂತೆ ಪ್ರೀತಿ ಮಾಡಲು ಶುರು ಮಾಡಿದ್ದರು. ಇನ್ನು ಈ ವೇಳೆ ಅಕ್ಷಯ್ ಆಕೆಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳಸಿದ್ದಾನೆ. ಅಷ್ಟೇ ಅಲ್ಲದೇ, ಆಕೆ ಗರ್ಭಿಣಿಯಾದಾಗ ಗರ್ಭಪಾತ ಕೂಡ ಮಾಡಿಸಿದ್ದನಂತೆ. ಯುವತಿ ಬಳಿಯಿಂದ ಅಕ್ಷಯ್ ಹುಟ್ಟುಹಬ್ಬದ ದಿನ ಐಫೋನ್ ಸೇರಿ ಅನೇಕ ಬ್ರಾಂಡೆಡ್ ವಸ್ತುಗಳನ್ನು ಪಡೆದುಕೊಂಡಿದ್ದಾನೆ ಎನ್ನಲಾಗ್ತಿದೆ.
ಇದೀಗ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಆಗಿದ್ದಾನೆ. ಈ ಹಿನ್ನೆಲೆಯಲ್ಲಿ ಯುವತಿ ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.