ಈ ಘಟನೆ ನಡೆದಿದ್ದು ಬೇರೆ ಎಲ್ಲೂ ಅಲ್ಲ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಲಕಡ ತಾಲೂಕಿನಲ್ಲಿ. ಕಡಪ ಜಿಲ್ಲೆಯ ದೇವಪಟ್ಲ ಗ್ರಾಮದ ಹುಸೇನ್ ನಾಯಕ ಲಾರಿ ಡ್ರೈವರ್. ಚಿತ್ತೂರು ಜಿಲ್ಲೆಯ ಗುರ್ರಂಕೊಂಡ ತಾಲೂಕಿನ ಅಮ್ಮಾಜಿಯನ್ನು ಐದು ವರ್ಷದ ಹಿಂದೆ ಹುಸೇನ್ ಲವ್ ಮಾಡಿ ಮದುವೆ ಆಗಿದ್ದ. ಇವರ ಪ್ರೀತಿಗೆ ಸಾಕ್ಷಿಯೆಂಬಂತೆ ಇಬ್ಬರು ಮಕ್ಕಳೂ ಇವೆ.
ಗಂಡ, ಹೆಂಡ್ತಿ ಅಂದ್ಮೇಲೆ ಜಗಳ ಸಹಜ. ಹೀಗೆ ಇಬ್ಬರು ಜಗಳವಾಡಿದ್ದಾರೆ. ಕಿತ್ತಾಟದ ಬಳಿಕ ಅಮ್ಮಾಜಿ ತವರು ಮನೆಗೆ ಹೋಗಿದ್ದಾಳೆ. ಇನ್ನು ಹುಸೇನ್ ಕೋಪ ತಣ್ಣಗಾಗಿದೆ. ಹುಸೇನ್ ನಾಯಕ ನೇರ ಅತ್ತೆ-ಮಾವನ ಮನೆಗೆ ತೆರಳಿ ಅಮ್ಮಾಜಿಯನ್ನು ಕರೆದಿದ್ದಾನೆ. ಅಮ್ಮಾಜಿ ಇದಕ್ಕೆ ನಿರಾಕರಿಸಿದ್ದಾಳೆ. ಹುಸೇನ್ ಆಗಾಗ ಅಮ್ಮಾಜಿ ನೋಡಲು ಅತ್ತೆ-ಮಾವನ ಮನೆಗೆ ಹೋಗಿ ಬರುತ್ತಿದ್ದ.
ಇನ್ನು ಅಮ್ಮಾಜಿ ಜೀವನಕ್ಕಾಗಿ ಆಶಾ ಕಾರ್ಯಕರ್ತೆಯಾಗಿ ಕೆಲಸಕ್ಕೆ ಸೇರಿಕೊಂಡಳು. ಡ್ರೈವರ್ ಹುಸೇನ್ ಸಹ ದುಡಿದ ಹಣವೆಲ್ಲ ಹೆಂಡ್ತಿ ಅಮ್ಮಾಜಿಗೆ ನೀಡುತ್ತಿದ್ದ. ಬಳಿಕ ಸಾಕಷ್ಟು ಬಾರಿ ಅಮ್ಮಾಜಿಯನ್ನು ಸಂಸಾರ ನಡೆಸಲು ಹುಸೇನ್ ಕರೆದಿದ್ದ. ಆದ್ರೆ ಆಕೆ ತವರು ಮನೆ ಬಿಟ್ಟು ಬರಲು ಪದೇ ಪದೆ ನಿರಾಕರಿಸುತ್ತಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಹುಸೇನ್.