ಹುಬ್ಬಳ್ಳಿ: ಮೆಣಸಿನಕಾಯಿ ಬೆಳೆ ನಡುವೆ ಗಾಂಜಾ ಗಿಡಗಳನ್ನು ಬೆಳೆದಿದ್ದ ರೈತನನ್ನು ಬಂಧಿಸುವಲ್ಲಿ ಕುಂದಗೋಳ ತಾಲೂಕಿನ ಗುಡಿಗೇರಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೆಣಸಿನಕಾಯಿ ನಡುವೆ ಗಾಂಜಾ ಬೆಳೆದ ಆರೋಪ: ಓರ್ವ ಅರೆಸ್ಟ್
ಮೆಣಸಿನಕಾಯಿ ಬೆಳೆಯ ಮಧ್ಯದಲ್ಲಿ ಗಾಂಜಾ ಬೆಳೆದಿದ್ದ ರೈತನನ್ನು ಪೊಲೀಸರು ಬಂಧಿಸಿದ್ದು, 32 ಸಾವಿರ ರೂ. ಮೌಲ್ಯದ 700 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
Arrest
ದೇವರಹಳ್ಳದ ಶರೀಫ್ ಸಾಬ್ ಹುಸೇನ್‌ಸಾಬ್ ದೊಡ್ಡಮನಿ ಬಂಧಿತ ಆರೋಪಿ. ಈತ ಗುಡಗೇರಿ ಸಮೀಪದ ಪಶುಪತಿಹಾಳ ಗ್ರಾಮದಲ್ಲಿರುವ ತನ್ನ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿದ್ದು, ಇದರ ನಡುವೆ ಗಾಂಜಾ ಗಿಡಗಳನ್ನು ಬೆಳೆದಿದ್ದ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 32 ಸಾವಿರ ರೂ. ಮೌಲ್ಯದ 700 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಗುಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.