ಕರ್ನಾಟಕ

karnataka

ETV Bharat / jagte-raho

ಕೌಟುಂಬಿಕ ಕಲಹದ ಜೊತೆಗೆ ಕೊರೊನಾ ಭೀತಿ: ಆತ್ಮಹತ್ಯೆಗೆ ಶರಣಾದ ವ್ಯಕ್ತಿ - ಬೆಂಗಳೂರು ಡ್ರೈವರ್ ಆತ್ಮಹತ್ಯೆ ನ್ಯೂಸ್​

ಕೊರೊನಾ ಹಿನ್ನೆಲೆ ಕೆಲಸವಿಲ್ಲದೆ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದ ವ್ಯಕ್ತಿಯೋರ್ವರು ಮುಂದಿನ ದಿನಗಳಲ್ಲಿ ಹೇಗೆ ಜೀವನ ಸಾಗಿಸುವುದು ಅನ್ನೋ ಭಯದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದ ವ್ಯಕ್ತಿ
ಆತ್ಮಹತ್ಯೆಗೆ ಶರಣಾದ ವ್ಯಕ್ತಿ

By

Published : May 19, 2020, 3:39 PM IST

ಬೆಂಗಳೂರು: ರಾಜ್ಯದಲ್ಲಿ ಲಾಕ್​ಡೌನ್​ ಸಡಿಲಿಕೆ‌ ಮಾಡಲಾಗಿದೆ. ಆದರೆ ಕೊರೊನಾ ಮಧ್ಯೆ ‌ಕೆಲಸ‌ ಮಾಡುವುದು ಹೇಗೆ, ಜೀವನ ಹೇಗೆ ಸಾಗಿಸುವುದು ಅನ್ನೋ ಭಯದಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.

ಮಣಿ ಕೆ. (38) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ‌ಡ್ರೈವರ್ ಆಗಿ ಕೆಲಸ ಮಾಡಿಕೊಂಡಿದ್ದ ಇವರು, ಲಾಕ್​ಡೌನ್​ ಇದ್ದ ಕಾರಣ ಮನೆಯಲ್ಲಿಯೇ ಕೆಲಸ ಇಲ್ಲದೆ ಕಾಲ ಕಳೆಯುತ್ತಿದ್ದರು. ಕೈಯ್ಯಲ್ಲಿ ದುಡ್ಡು ಇಲ್ಲದ ಕಾರಣ ದಿನವೂ ಕುಟುಂಬದಲ್ಲಿ ಕಲಹ ನಡೆಯುತ್ತಿತ್ತಂತೆ. ಹಾಗಾಗಿ ಮುಂದೆ ಹೇಗೆ ಜೀವನ ಸಾಗಿಸುವುದು ಎನ್ನುವ ಭಯದಲ್ಲಿ ಡೆತ್ ನೋಟ್​​​​ ಬರೆದಿಟ್ಟು ಆತ್ಮಹತ್ಯೆ‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.‌

ಈ ಕುರಿತು ‌ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details