ಹರಿದ್ವಾರ: ಉತ್ತರಾಖಂಡದ ಹರಿದ್ವಾರ ಜಿಲ್ಲೆಯ ರೋಶನಾಬಾದ್ನಲ್ಲಿರುವ ತಾತ್ಕಾಲಿಕ ಜೈಲಿನಿಂದ ಇಂದು ಎಂಟು ಮಂದಿ ಕೈದಿಗಳು ತಪ್ಪಿಸಿಕೊಂಡಿದ್ದಾರೆ.
ಹರಿದ್ವಾರ ಕಾರಾಗೃಹದಿಂದ 8 ಕೈದಿಗಳು ಪರಾರಿ!
ಕೋವಿಡ್-19 ಮಾರ್ಗಸೂಚಿಗಳನುಸಾರವಾಗಿ ಒಂದು ವಾರದ ಹಿಂದೆ ಹರಿದ್ವಾರದ ತಾತ್ಕಾಲಿಕ ಜೈಲಿಗೆ ಸ್ಥಳಾಂತರಿಸಲಾಗಿದ್ದ ಎಂಟು ಮಂದಿ ಕೈದಿಗಳು ಇಂದು ಪರಾರಿಯಾಗಿದ್ದಾರೆ.
ರಾಜ್ಯದಲ್ಲಿ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಭಿಕ್ಷುಕರಿಗೆ ಆಶ್ರಯ ನೀಡಲಾಗುತ್ತಿದ್ದ ಕಟ್ಟಡವನ್ನು ತಾತ್ಕಾಲಿಕ ಜೈಲಾಗಿ ಮಾರ್ಪಾಡು ಮಾಡಲಾಗಿತ್ತು. ಕೋರ್ಟ್ನಲ್ಲಿ ವಿಚಾರಣೆ ಬಳಿಕ ಈ ಕೈದಿಗಳನ್ನು ಕೇಂದ್ರ ಕಾರಾಗೃಹಕ್ಕೆ ಕಳುಹಿಸಬೇಕಾಗಿತ್ತು. ಆದರೆ ಕೋವಿಡ್-19 ಮಾರ್ಗಸೂಚಿಗಳನುಸಾರವಾಗಿ ಒಂದು ವಾರದ ಹಿಂದೆ ಇವರನ್ನು ಕೆಲದಿನಗಳ ಅವಧಿಗೆ ಈ ತಾತ್ಕಾಲಿಕ ಜೈಲಿಗೆ ಶಿಫ್ಟ್ ಮಾಡಲಾಗಿತ್ತು.
ಕೈದಿಗಳು ಪರಾರಿಯಾಗುತ್ತಿದ್ದಂತೆಯೇ ಜಿಲ್ಲೆಯಾದ್ಯಂತ ಜನರಿಗೆ ಎಚ್ಚರಿಕೆ ನೀಡಿರುವ ಪೊಲೀಸರು, ಗಡಿ ಪ್ರದೇಶಗಳಲ್ಲಿ ಸಂಚರಿಸುವ ಪ್ರತಿಯೊಂದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಕೈದಿಗಳಿಗಾಗಿ ಶೋಧ ಕಾರ್ಯಾಚರಣೆ ಮುಂದುವರೆದಿದೆ.