ಕರ್ನಾಟಕ

karnataka

ETV Bharat / jagte-raho

ಏರ್​ಪೋರ್ಟ್​ನಲ್ಲಿ ಚಿನ್ನ, 1.79 ಕೋಟಿ ರೂ. ಮೌಲ್ಯದ ಸಿಗರೇಟ್ ಕಳ್ಳಸಾಗಣೆಗೆ ಯತ್ನ: 6 ಮಂದಿ ಅರೆಸ್ಟ್​ - 1.79 ಕೋಟಿ ರೂ. ಮೌಲ್ಯದ ಸಿಗರೇಟ್ ಕಳ್ಳಸಾಗಣೆಗೆ ಯತ್ನ

ದುಬೈನಿಂದ ಬಂದ ಆರು ಪ್ರಯಾಣಿಕರಿಂದ 64 ಲಕ್ಷ ರೂ. ಮೌಲ್ಯದ 1.26 ಕೆಜಿ ಚಿನ್ನ, 1.79 ಕೋಟಿ ರೂ. ಮೌಲ್ಯದ ಸಿಗರೇಟ್ ಅನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

6 held at Delhi airport for smuggling gold
ಚಿನ್ನ

By

Published : Dec 6, 2020, 12:22 PM IST

ನವದೆಹಲಿ: ಭಾರತಕ್ಕೆ ಚಿನ್ನ ಹಾಗೂ ಸಿಗರೇಟ್ ಕಳ್ಳಸಾಗಣೆ ಮಾಡಲು ದುಬೈನಿಂದ ಬಂದ ಆರು ಆರೋಪಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಶುಕ್ರವಾರ ದುಬೈನಿಂದ ಆಗಮಿಸಿದ ಹತ್ತು ಪ್ರಯಾಣಿಕರನ್ನು ಅಧಿಕಾರಿಗಳು ತಡೆದಿದ್ದರು. ಇವರ ಲಗೇಜ್​​ ಬ್ಯಾಗ್​ಗಳನ್ನು ನೋಡಿದಾಗ ಆರು ಮಂದಿಯ ಬಳಿ ದೊರೆತ 64 ಲಕ್ಷ ರೂ. ಮೌಲ್ಯದ 1.26 ಕೆಜಿ ಚಿನ್ನ, 1.79 ಕೋಟಿ ರೂ. ಮೌಲ್ಯದ ಸಿಗರೇಟ್ ಅನ್ನು ವಶಪಡಿಸಿಕೊಂಡಿದ್ದಾರೆ. ವಿವಿಧ ಬ್ರಾಂಡ್‌ಗಳ ವಿದೇಶಿ ಸಿಗರೇಟ್ ಇವಾಗಿದ್ದು, 7.52 ಲಕ್ಷ ಸ್ಟಿಕ್‌ಗಳು ಸಿಕ್ಕಿವೆ.

ಇದನ್ನೂ ಓದಿ:ಚೆನ್ನೈ ವಿಮಾನ ನಿಲ್ದಾಣದಲ್ಲಿ 1.8 ಕೆಜಿ ಚಿನ್ನ ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

ಆರೋಪಿಗಳು ಈ ಹಿಂದೆ ಸುಮಾರು 2.41 ಕೋಟಿ ರೂ.ಗಳ ಮೌಲ್ಯದ 18 ಲಕ್ಷ ಸಿಗರೇಟ್ ಸ್ಟಿಕ್‌ಗಳನ್ನು ಕಳ್ಳಸಾಗಣೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.

ABOUT THE AUTHOR

...view details