ಕರ್ನಾಟಕ

karnataka

ETV Bharat / jagte-raho

ಹೆಚ್ಚಿನ ಹಣ ಸಂಪಾದನೆ ಆಮಿಷ ತೋರಿಸಿ 50 ಲಕ್ಷ ರೂ. ದೋಚಿದ ಖದೀಮರು..! - ಆನ್​ಲೈನ್​ ಮೋಸ ಪ್ರಕರಣ

ಉದ್ಯೋಗಾಂಕ್ಷಿಯಿಂದ ಆನ್​ಲೈನ್​​ನಲ್ಲಿ ಕೆಲಸಕ್ಕಾಗಿ ಅರ್ಜಿ ಸ್ವೀಕರಿಸಿದ್ದ ಕಂಪನಿಯೊಂದು ಹೆಚ್ಚಿನ ಹಣ ಸಂಪಾದನೆ ಮಾಡುವ ಅಮಿಷ ತೋರಿಸಿ 50 ಲಕ್ಷ ರೂ. ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಆರೋಪಿಗಳಿಗಾಗಿ ವೈಟ್​​​ಫೀಲ್ಡ್​​ ಪೊಲೀಸರು ಬಲೆ ಬೀಸಿದ್ದಾರೆ.

50-lakh-money-cheated-from-the-employer-who-applied-online-for-the-job
ಹಣ ವಂಚನೆ ಪ್ರಕರಣ

By

Published : Dec 14, 2020, 10:59 PM IST

Updated : Dec 15, 2020, 12:43 AM IST

ಬೆಂಗಳೂರು: ಆನ್​​ಲೈನ್​ನಲ್ಲಿ ಕೆಲಸಕ್ಕಾಗಿ‌ ಉದ್ಯೋಗಾಂಕ್ಷಿಯಿಂದ ಅರ್ಜಿ ಸ್ವೀಕರಿಸಿದ್ದ ಕಂಪನಿಯೊಂದು ಹೆಚ್ಚಿನ ಹಣ ಸಂಪಾದನೆ ಮಾಡುವ ಆಮಿಷ ತೋರಿಸಿ 50 ಲಕ್ಷ ರೂ. ವಂಚಿಸಿರುವ ಘಟನೆ ಸಿಲಿಕಾನ್​​ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

ಉಮೇಶ್, ಅಲಿಸಾ, ಗ್ಲಾನ್‌ಡಾನ್, ಜೇಮ್ಸ್, ನೆಹರು ಸಿಂಗ್, ಕುಮಾರ್ ಎಂಬುವವರ ವಿರುದ್ಧ ವರ್ತೂರು ನಿವಾಸಿ ಲಾಲ್ ವಾಸ್ವಾನ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ವೈಟ್ ಫೀಲ್ಡ್ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಓದಿ-ಲವರ್​ಗೆ​​ ನರ್ಸ್​ಗಳ ಸ್ನಾನದ ವಿಡಿಯೋ ಕಳುಹಿಸುತ್ತಿದ್ದ ನರ್ಸ್​​​: ಪ್ರಿಯತಮ ಏನು ಮಾಡುತ್ತಿದ್ದ ಗೊತ್ತಾ!

ಪ್ರಕರಣದ ಹಿನ್ನೆಲೆ

ಆನ್‌ಲೈನ್‌ನಲ್ಲಿ ಉದ್ಯೋಗ ಹುಡುಕುತ್ತಿದ್ದ ಲಾಲ್ ವಾಸ್ವಾನ್‌ಗೆ ನೆಹರು ಸಿಂಗ್ ಎಂಬುವರ ಪರಿಚಯವಾಗಿದೆ. ಆಗ 1000 ರೂ. ಪಾವತಿಸಿ ನೆಹರು ಸಿಂಗ್ ಕಂಪನಿಗೆ ಸೇರಿದ್ದರು. ನಂತರ ಲಾಲ್​​ಗೆ ಹೆಚ್ಚಿನ ಹಣ ಸಂಪಾದನೆ ಮಾಡಿಸುವುದಾಗಿ ನಂಬಿಸಿ ವಿವಿಧ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಿಸಿದ್ದರು. ಮೊದಲು ಎರಡು ಬಾರಿ ಲಾಲ್ ವಾಸ್ವಾನ್ ಲಾಭ ಪಡೆದಿದ್ದ. ಬಳಿಕ ಸುಮಾರು 50 ಲಕ್ಷ ರೂ. ಹೂಡಿಕೆ ಮಾಡಿಸಿದ ವಂಚಕರು ತಮ್ಮ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡು ನಾಪತ್ತೆಯಾಗಿದ್ದರು. ಕೊನೆಗೆ ಲಾಲ್​ಗೆ ಅಸಲು ಹಣ ಯಾವುದನ್ನೂ ನೀಡದೇ ವಂಚನೆ ಮಾಡಿದ್ದಾರೆ.

ಸದ್ಯ ಹಣ ಕಳೆದುಕೊಂಡ ವಾಸ್ವಾನ್ ವೈಟ್‌ಫೀಲ್ಡ್ ಸೈಬರ್ ಠಾಣೆಗೆ ದೂರು ನೀಡಿದ್ದಾರೆ. ಐಟಿ ಕಾಯ್ದೆಯಡಿ ವಂಚನೆ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Last Updated : Dec 15, 2020, 12:43 AM IST

ABOUT THE AUTHOR

...view details