ದಕ್ಷಿಣ ದಿನಾಜ್‌ಪುರ : ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ಐವರ ಶವ ಪಶ್ಚಿಮ ಬಂಗಾಳದ ದಕ್ಷಿಣ ದಿನಾಜ್‌ಪುರ ಜಿಲ್ಲೆಯಲ್ಲಿ ಪತ್ತೆಯಾಗಿವೆ.
ಒಂದೇ ಕುಟುಂಬದ ಐವರು ಶವವಾಗಿ ಪತ್ತೆ.. ಸಾಮೂಹಿಕವಾಗಿ ಕೊಲೆಗೈದಿರುವ ಶಂಕೆ - ಪಶ್ಚಿಮ ಬಂಗಾಳ ಕ್ರೈಂ ಸುದ್ದಿ
ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾಮೂಹಿಕ ಕೊಲೆ ನಡೆಸಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ..
![ಒಂದೇ ಕುಟುಂಬದ ಐವರು ಶವವಾಗಿ ಪತ್ತೆ.. ಸಾಮೂಹಿಕವಾಗಿ ಕೊಲೆಗೈದಿರುವ ಶಂಕೆ 5 members of the same family found dead in South Dinajpur](https://etvbharatimages.akamaized.net/etvbharat/prod-images/768-512-9474715-thumbnail-3x2-megha.jpg)
ಒಂದೇ ಕುಟುಂಬದ ಐವರು ಶವವಾಗಿ ಪತ್ತೆ
ಇಲ್ಲಿನ ಜಮಾಲ್‌ಪುರ ಗ್ರಾಮದ ನಿವಾಸಿ ಅನುಪ್ ಬಾರ್ಮನ್ ಎಂಬಾತನ ಮತ್ತು ಇಬ್ಬರು ಮಹಿಳೆಯರು ಹಾಗೂ ಇಬ್ಬರು ಮಕ್ಕಳ ಮೃತದೇಹಗಳು ಅವರ ಮನೆಯಲ್ಲಿ ಪತ್ತೆಯಾಗಿವೆ.
ಇಂದು ಬೆಳಗ್ಗೆ ಇದನ್ನು ಗಮನಿಸಿದ ಗ್ರಾಮಸ್ಥರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾಮೂಹಿಕ ಕೊಲೆ ನಡೆಸಿರುವ ಶಂಕೆಯನ್ನ ಪೊಲೀಸರು ವ್ಯಕ್ತಪಡಿಸಿದ್ದಾರೆ.