ಉಜ್ಜೈನಿ (ಮಧ್ಯ ಪ್ರದೇಶ): ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವ್ಯಾನ್ಗೆ ಟ್ರಕ್ ಗುದ್ದಿದ ಪರಿಣಾಮ ಐವರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ.
ವ್ಯಾನ್-ಟ್ರಕ್ ನಡುವೆ ಡಿಕ್ಕಿ: ಐವರು ಕಾರ್ಮಿಕರು ಸಾವು, 7 ಮಂದಿಗೆ ಗಾಯ - ಐವರು ಕಾರ್ಮಿಕರು ಸಾವು
ಮಧ್ಯ ಪ್ರದೇಶದ ಕಾಟ್ನಿ ಜಿಲ್ಲೆಯಿಂದ ನೀಮುಚ್‌ಗೆ ಕಾರ್ಮಿಕರು ತೆರಳುತ್ತಿದ್ದ ವ್ಯಾನ್ಗೆ ಟ್ರಕ್ ಗುದ್ದಿದ ಪರಿಣಾಮ ಐವರು ಸಾವನ್ನಪ್ಪಿದ್ದು, 7 ಮಂದಿ ಗಾಯಗೊಂಡಿದ್ದಾರೆ.
ಮಧ್ಯ ಪ್ರದೇಶ ರಸ್ತೆ ಅಪಘಾತ
ಇಂದು ನಸುಕಿನ ಜಾವ 3.30ರ ಸುಮಾರಿಗೆ ಘಟನೆ ನಡೆದಿದ್ದು, ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೂಪೇಶ್ ದ್ವಿವೇದಿ ತಿಳಿಸಿದ್ದಾರೆ.
ಕಾರ್ಮಿಕರು ಕಾಟ್ನಿ ಜಿಲ್ಲೆಯಿಂದ ನೀಮುಚ್‌ಗೆ ತೆರಳುತ್ತಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರೆಸಿರುವುದಾಗಿ ರೂಪೇಶ್ ದ್ವಿವೇದಿ ಹೇಳಿದ್ದಾರೆ.