ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ಅಭ್ಯರ್ಥಿಗಳುಒಂದಲ್ಲ ಒಂದು ರೀತಿ ತಂತ್ರ ಹೂಡುವ ಮೂಲಕ ತಮ್ಮ ಪರ ಮತ ಚಲಾಯಿಸುವಂತೆ ಪ್ರೇರೇಪಿಸುವುದು ಸಾಮಾನ್ಯವೆಂಬಂತೆ ಆಗಿದೆ. ಚುನಾವಣೆ ಘೋಷಣೆ ಆದಾಗಿನಿಂದ ಈವರೆಗೆ ರಾಜಕೀಯ ಪಕ್ಷಗಳು ಕಳ್ಳ ಮಾರ್ಗದ ಮೂಲಕ ಮತದಾರರಿಗೆ ಹಂಚಲು ಅಕ್ರಮವಾಗಿ ಸಾಗಿಸುತ್ತಿದ್ದ ಕೋಟ್ಯಂತರ ರೂ.ನಗದನ್ನು ಚುನಾವಣಾ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ರಾಜ್ಯದಲ್ಲಿ 1512 ಪ್ಲೈಯಿಂಗ್ ಸ್ಕ್ವಾಡ್ಸ್ ಹಾಗೂ 1837 ಸರ್ವೆಲೆನ್ಸ್ ಟೀಮ್, 320 ಅಬಕಾರಿ ಹಾಗೂ180 ವಾಣಿಜ್ಯ ತೆರಿಗೆ ತಂಡಗಳಿಂದ ಇವರೆಗೂ ಒಟ್ಟು 44,39,37,473 ಕೋಟಿ ರೂ. ಮೌಲ್ಯದ ನಗದು ಹಾಗೂ ಮದ್ಯ, ಮಾದಕದ್ರವ್ಯ ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮ ತಡೆಗಟ್ಟಲು ಈಗಾಗಲೇ ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ರಾಜ್ಯದ ಸೂಕ್ತ ಸ್ಥಳಗಳಲ್ಲಿ ನಿರ್ಮಿಸಿರುವಚೆಕ್ ಪೋಸ್ಟ್ಗಳಲ್ಲಿ6,40,21,591 ಕೋಟಿ ರೂ. ನಗದು, 32,76,843.53 ಮೌಲ್ಯದ 5282.596 ಲೀಟರ್ ಮದ್ಯ ಹಾಗೂ 6,05,000 ಬೆಲೆಯ 131.59 ಕೆ.ಜಿ ಮಾದಕ ದ್ರವ್ಯ ಮತ್ತು76,25,775 ಮೌಲ್ಯದಇತರೆ ಬೆಲೆಬಾಳುವ ವಸ್ತುಗಳನ್ನು ವಶಪಡಿಸಿಕೊಂಡು 869 ಎಫ್ಐಆರ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ಅಬಕಾರಿ ಇಲಾಖೆಯ 30,11,01,873 ಮೌಲ್ಯದ 7,03,377,46 ಲೀಟರ್ ಗಳಷ್ಟು ಮದ್ಯ. 4,15,000 ಮೌಲ್ಯದ 13.542 ಕೆಜಿ. ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡು 1633 ಗಂಭೀರ ಪ್ರಕರಣಗಳನ್ನು ದಾಖಲಿಸಿದೆ. ಮದ್ಯದ ಪರವಾನಗಿಯನ್ನು ಉಲ್ಲಂಘಿಸಿದ 1979 ಪ್ರಕರಣಗಳು, 4 ಎನ್ಡಿಪಿಎಸ್ ಹಾಗೂ ಕರ್ನಾಟಕ ಅಬಕಾರಿ ಕಾಯ್ದೆ 1965ರ ಪರಿಚ್ಛೇದ15 (ಎ) ಅನ್ವಯ 5924 ಪ್ರಕರಣಗಳನ್ನು ದಾಖಲಿಸಿದೆ.841 ವಿವಿಧ ಮಾದರಿಯ ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.