ಕರ್ನಾಟಕ

karnataka

ETV Bharat / jagte-raho

ಬೊಲೆರೊ-ಟ್ರ್ಯಾಕ್ಟರ್​​ ನಡುವೆ ಭೀಕರ ಅಪಘಾತ : ಸ್ಥಳದಲ್ಲೇ ನಾಲ್ವರ ದುರ್ಮರಣ - ಧನ್​ಬಾದ್ ರಸ್ತೆ ಅಪಘಾತದಲ್ಲಿ ನಾಲ್ವರು ಸಾವು

ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

4 died in road accident in dhanbad
ಬೊಲೆರೊ-ಟ್ರ್ಯಾಕ್ಟರ್​​ ನಡುವೆ ಡಿಕ್ಕಿ

By

Published : Dec 10, 2020, 11:31 AM IST

ಧನ್​ಬಾದ್​​ (ಜಾರ್ಖಂಡ್): ಬೊಲೆರೊ ಮತ್ತು ಟ್ರ್ಯಾಕ್ಟರ್​​ ನಡುವೆ ತಡರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಾರ್ಖಂಡ್​ನ ಧನ್​ಬಾದ್​ನಲ್ಲಿ ನಡೆದಿದೆ.

ಧನ್​ಬಾದ್​ನ ರಾಜ್‌ಗಂಜ್ ಬಳಿಯ ಜಿಟಿ ರಸ್ತೆಯಲ್ಲಿ ಅಪಘಾತ ನಡೆದಿದ್ದು, ಘಟನೆಯಲ್ಲಿ ಇತರ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಘಟನೆ ಬಳಿಕ ಸುಮಾರು ಮೂರು ಗಂಟೆಗಳ ಕಾಲ ಜಿಟಿ ರಸ್ತೆಯಲ್ಲಿ ಟ್ರಾಫಿಕ್​ ಜಾಮ್​ ಆಗಿತ್ತು. ಕ್ರೇನ್ ಸಹಾಯದಿಂದ ನುಜ್ಜುಗುಜ್ಜಾದ ವಾಹನಗಳನ್ನು ರಸ್ತೆಯಿಂದ ತೆರವು ಮಾಡಿ, ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಇದನ್ನೂ ಓದಿ: ಭೀಕರ ರಸ್ತೆ ಅಪಘಾತ: ಮೂವರು ಸಾವು, ಆರು ಮಂದಿ ಸ್ಥಿತಿ ಗಂಭೀರ

ಮೃತರನ್ನು ರಾಹುಲ್ ಪಾಂಡೆ, ಸಲೀಮ್ ಶೇಖ್, ಅತಿಕುಲ್ ಶೇಖ್ ಮತ್ತು ಅಂಜರುಲ್ ಶೇಖ್ ಎಂದು ಗುರುತಿಸಲಾಗಿದೆ. ಬೊಲೆರೊ ವಾಹನದಲ್ಲಿದ್ದವರು ಉತ್ತರ ಪ್ರದೇಶದಿಂದ ಪಶ್ಚಿಮ ಬಂಗಾಳಕ್ಕೆ ಹೋಗುತ್ತಿದ್ದರು ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ರಾಜಗಂಜ್ ಠಾಣಾ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details