ಕರ್ನಾಟಕ

karnataka

ETV Bharat / jagte-raho

ಆಹಾರ ಇಲಾಖೆ ಅಧಿಕಾರಿಗಳ ದಾಳಿ: ಕಾಳಸಂತೆಗೆ ಸಾಗಿಸುತಿದ್ದ 30 ಟನ್ ಅನ್ನಭಾಗ್ಯ ಅಕ್ಕಿ ವಶ

ಅನ್ನಭಾಗ್ಯ ಯೋಜನೆಯಡಿ ಬಡವರ ಪಾಲಾಗಬೇಕಿದ್ದ ₹ 9 ಲಕ್ಷ ಮೌಲ್ಯದ 30 ಟನ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

30 tonnes of rice seized in Basavakalyana
ಅನ್ನಭಾಗ್ಯ ಅಕ್ಕಿ ವಶ

By

Published : Dec 17, 2019, 4:56 PM IST

ಬಸವಕಲ್ಯಾಣ:ಅನ್ನಭಾಗ್ಯ ಯೋಜನೆಯಡಿ ಬಡವರ ಪಾಲಾಗಬೇಕಿದ್ದ₹ 9 ಲಕ್ಷ ಮೌಲ್ಯದ 30 ಟನ್ ಪಡಿತರ ಅಕ್ಕಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿಯಿಂದ ಗುಜರಾತ್ ಕಡೆ​ಗೆ ಸಾಗಿಸುವಾಗ ರಾಷ್ಟ್ರೀಯ ಹೆದ್ದಾರಿ 65ರರಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ಅಕ್ಕಿ ತುಂಬಿದ ಲಾರಿ ಜಪ್ತಿ ಮಾಡಿಕೊಂಡು, ಲಾರಿ ಚಾಲಕ ಶರಮಣಿ ಎಂಬಾತನನ್ನು ಬಂಧಿಸಿದ್ದಾರೆ.

ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆದ ಅಧಿಕಾರಿಗಳು

ತಹಶೀಲ್ದಾರ್ ಸಾವಿತ್ರಿ ಸಲಗರ್ ಹಾಗೂ ಆಹಾರ ಇಲಾಖೆ ಅಧಿಕಾರಿಗಳಾದ ನೀಲಮ್ಮ ಗಾಯಕವಾಡ, ರಾಮರತನ ದೇಗಲೆ, ರವಿ ಸೂರ್ಯವಂಶಿ ನೇತೃತ್ವದ ತಂಡ ದಾಳಿ ನಡೆಸಿದೆ. ಈ ಕುರಿತು ಬಸವಕಲ್ಯಾಣ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details