ಕರ್ನಾಟಕ

karnataka

ETV Bharat / jagte-raho

ಐಷಾರಾಮಿ ಕಾರ್​ನಲ್ಲಿ ಕೆಜಿಗಟ್ಟಲೇ ಬಂಗಾರ ಸಾಗಾಟ... ಆದ್ರೆ! - ಆದ್ರೆ

ಪಶ್ಚಿಮ ಗೋದಾವರಿ: ಐಷಾರಾಮಿ ಕಾರೊಂದರಲ್ಲಿ ಕೆಜಿಗಟ್ಟಲೇ ಬಂಗಾರವನ್ನು ಸಾಗಿಸುತ್ತಿರುವಾಗ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಕೈಗೊಂಡಿರುವ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ ನಡೆದಿದೆ.

ಕೃಪೆ: ಸಾಮಾಜಿಕ ಜಾಲತಾಣ

By

Published : Mar 12, 2019, 9:01 PM IST

ವಿಶಾಖಪಟ್ಟಣಂನಿಂದ ವಿಜಯವಾಡಕ್ಕೆ ಆಡಿ ಕಾರ್​ನಲ್ಲಿ 30 ಕೆಜಿ ಬಂಗಾರ ಸಾಗಿಸುತ್ತಿರುವುದರ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ಪೊಲೀಸರು ಉಂಗುಟೂರು ರಾಷ್ಟ್ರೀಯ ಹೆದ್ದಾರಿ ಟೋಲ್​ಗೇಟ್​ನಲ್ಲಿ ತನಿಖೆ ಕೈಗೊಂಡಿದ್ದರು. ಎಪಿ 31 ಡಿಟಿ 7777 ಆಡಿ ಕಾರ್​ನಲ್ಲಿ 100 ಗ್ರಾಂ ತೂಕದ 300 ಬಂಗಾರದ ಬಿಸ್ಕೆಟ್​ಗಳನ್ನು ಪತ್ತೆ ಹಚ್ಚಿದ್ದಾರೆ. ಒಟ್ಟು 30 ಕೆಜಿ ಬಂಗಾರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಬಂಗಾರಕ್ಕೆ ಸಂಬಂಧಿಸಿದ ಬಿಲ್ಲುಗಳು ಇರುವುದರಿಂದ ಸಿಐ ಜೊತೆ ತಹಶೀಲ್ದಾರ್​ ಪರಿಶೀಲಿಸಿದ್ದಾರೆ. ಆಡಿ ಕಾರ್​ನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ತನಿಖೆ ನಂತರ ಮುಂದಿನ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಹೇಳಿದ್ದಾರೆ.

ABOUT THE AUTHOR

...view details