ಕರ್ನಾಟಕ

karnataka

ತೆಲಂಗಾಣ ಕೊಳವೆ ಬಾವಿ ದುರಂತ: 11 ಗಂಟೆಗಳ ಕಾರ್ಯಾಚರಣೆ ವಿಫಲ, ಉಸಿರುಗಟ್ಟಿ ಸಾವಿಗೀಡಾದ ಕಂದಮ್ಮ

ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಿನ್ನೆ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಮಗುವನ್ನು ರಕ್ಷಿಸಲು ಸತತ 11 ಗಂಟೆಗಳ ಕಾಲ ಪೊಲೀಸರು, NDRF ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದರಾದರೂ ಆಕ್ಸಿಜನ್​ ಕೊರತೆಯಿಂದ ಮಗು ಸಾವನ್ನಪ್ಪಿದೆ.

By

Published : May 28, 2020, 8:07 AM IST

Published : May 28, 2020, 8:07 AM IST

Updated : May 28, 2020, 9:06 AM IST

Telangana Bore Well incident
ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಗು ಸಾವು

ತೆಲಂಗಾಣ: ಇಲ್ಲಿನ ಮೇದಕ್ ಜಿಲ್ಲೆಯ ಪಾಪಣ್ಣಪೇಟೆ ಮಂಡಲದ ಪೊಡಚನಪಲ್ಲಿ ಗ್ರಾಮದಲ್ಲಿ ನಿನ್ನೆ ಸಂಜೆ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಮಗು ಇಂದು ಮುಂಜಾನೆ ಮೃತಪಟ್ಟಿದೆ.

ಕೊಳವೆ ಬಾವಿಯಲ್ಲಿ ಬಿದ್ದಿದ್ದ 3 ವರ್ಷದ ಬಾಲಕ ಸಾವು

ಬುಧವಾರ ಸಂಜೆ ಕೃಷಿ ಚಟುವಟಿಕೆಗೆಂದು ಕೊಳವೆ ಬಾವಿ ಕೊರೆದ ಅರ್ಧ ಗಂಟೆಯಲ್ಲೇ ಸಂಜಯ್​ ಸಾಯಿವರ್ಧನ್​ ಎಂಬ ಬಾಲಕ ಬೋರ್​ವೆಲ್ ಒಳಗೆ ಬಿದ್ದಿದ್ದನು. ಪೋಷಕರು ಬೇರೆ ಕೆಲಸಲ್ಲಿ ತೊಡಗಿಕೊಂಡಿದ್ದಾಗ, ಘಟನೆ ನಡೆದಿತ್ತು.

ಸತತ 11 ಗಂಟೆಗಳ ಕಾಲ ಪೊಲೀಸರು, NDRF ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರಾದರೂ ಆಕ್ಸಿಜನ್​ ಕೊರತೆಯಿಂದ ಬಾಲಕ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ಹೊರತೆಗಯಲಾಗಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮೇದಕ್ ಜಿಲ್ಲಾಧಿಕಾರಿ ಧರ್ಮ ರೆಡ್ಡಿ, ಬೋರ್​ವೆಲ್ ಕೊರೆಸಿ ಅದನ್ನು ಮುಚ್ಚಿರಲಿಲ್ಲ. ಕೊಳವೆ ಬಾವಿ ಮಾಲೀಕನಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

Last Updated : May 28, 2020, 9:06 AM IST

ABOUT THE AUTHOR

...view details