ಕರ್ನಾಟಕ

karnataka

ETV Bharat / jagte-raho

ಆತ್ಮಹತ್ಯೆ ಮಾಡಿಕೊಂಡ ಮೂವರು ಒಡಹುಟ್ಟಿದವರು... ಕಾರಣವೇನು? - ಮರಣೋತ್ತರ ಪರೀಕ್ಷೆ

ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ವರದಿಯ ನಂತರ ತನಿಖೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

suicide
suicide

By

Published : Jul 11, 2020, 7:58 AM IST

ಲಖಿಂಪುರ (ಉ.ಪ್ರ):ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರಪ್ರದೇಶದ ಲಖಿಂಪುರದಲ್ಲಿ ನಡೆದಿದೆ. ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಸಾವನ್ನಪ್ಪಿದ್ದಾರೆ.

ಈ ಘಟನೆ ಕೊಟ್ವಾಲಿ ಪಟ್ಟಣದ ಮಿಶ್ರಾನಾ ಚೌಕಿಯ ಶಾಂತಿನಗರ ಪ್ರದೇಶದಲ್ಲಿ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೂವರ ತಾಯಿ ಈ ಹಿಂದೆಯೇ ಮೃತಪಟ್ಟಿದ್ದು, ತಂದೆ ಕೆಲಸಕ್ಕೆ ಹೋಗಿದ್ದರು.

ರಾಜೇಶ್ವರ (35) , ವಿವೇಕ್ (33) ಮತ್ತು ಪ್ರೀತಿ (28) ಮೃತಪಟ್ಟವರು.

ಆತ್ಮಹತ್ಯೆ ಪತ್ರ

ಇವರ ತಂದೆ ಬೆಳಗ್ಗೆ ಲಖನೌಗೆ ಹೋಗಿದ್ದರು. ರಾತ್ರಿ ಹಿಂದಿರುಗಿದಾಗ, ಮನೆಯ ಬಾಗಿಲನ್ನು ಒಳಗಿನಿಂದ ಮುಚ್ಚಲಾಗಿತ್ತು. ಬಾಗಿಲು ಬಡಿದಾಗಲೂ ಯಾರೂ ಬಾಗಿಲು ತೆರೆಯದ ಕಾರಣ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಬಾಗಿಲು ಒಡೆದಾಗ ಘಟನೆ ಬೆಳಕಿಗೆ ಬಂದಿದೆ.

ವಿವೇಕ್ ಜೇಬಿನಲ್ಲಿ ಆತ್ಮಹತ್ಯೆ ಪತ್ರವೂ ಪತ್ತೆಯಾಗಿದೆ ಎಂದು ಸಿಒ ಸಿಟಿ ವಿಜಯ್ ಆನಂದ್ ಹೇಳಿದ್ದಾರೆ. ಇದರಲ್ಲಿ ತಾಯಿಯ ಮರಣದ ನಂತರ ನಾವು ಒಬ್ಬಂಟಿಯಾಗಿದ್ದೇವೆ ಎಂದು ಬರೆಯಲಾಗಿದೆ. ನಾವು ತಾಯಿಯನ್ನು ತುಂಬಾ ಪ್ರೀತಿಸುತ್ತೇವೆ. ಅದಕ್ಕಾಗಿಯೇ ನಾವು ಮೂವರೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ. ಇದರಲ್ಲಿ ಯಾರ ತಪ್ಪೂ ಇಲ್ಲ ಎಂದು ಬರೆಯಲಾಗಿದೆ.

ತಾಯಿಯ ಸಾವಿನಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮರಣೋತ್ತರ ವರದಿಯ ನಂತರ ತನಿಖೆ ಮುಂದುವರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details