ಕರ್ನಾಟಕ

karnataka

ETV Bharat / jagte-raho

ಹೊಸ ವರ್ಷದಂದೇ ದುರಂತ: ಸೇತುವೆಯಿಂದ ಕಂದಕಕ್ಕೆ ಕಾರು ಉರುಳಿ ಮೂವರು ಸಾವು - ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆ

ದೆಹಲಿಯಿಂದ ಮನಾಲಿಗೆ ಹೊಸ ವರ್ಷ ಆಚರಿಸಲೆಂದು ಬಂದಿದ್ದ ಮೂವರು ಯುವಕರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

road accident
ಸೇತುವೆಯಿಂದ ಕಂದಕಕ್ಕೆ ಕಾರು ಉರುಳಿ ಮೂವರು ಸಾವು

By

Published : Jan 1, 2021, 1:17 PM IST

ಸೋಲನ್ (ಹಿಮಾಚಲ ಪ್ರದೇಶ):ಹೊಸ ವರ್ಷವನ್ನು ಆಚರಿಸಿ ಹಿಂದಿರುಗುತ್ತಿದ್ದ ವೇಳೆ ರಸ್ತೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಿಮಾಚಲ ಪ್ರದೇಶದ ಸೋಲನ್ ಜಿಲ್ಲೆಯಲ್ಲಿ ನೆಡದಿದೆ.

ಮೃತರನ್ನು ದೆಹಲಿ ನಿವಾಸಿಗಳು ಎಂದು ಗುರುತಿಸಲಾಗಿದೆ. ದೆಹಲಿಯಿಂದ ಮನಾಲಿಗೆ ಹೊಸ ವರ್ಷವನ್ನು ಆಚರಿಸಲೆಂದು ಐವರು ಯುವಕರು ಕಾರಿನಲ್ಲಿ ಬಂದಿದ್ದರು. ಆದರೆ, ಪಾರ್ಟಿ ಮುಗಿಸಿ ಹಿಂದಿರುಗುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆಯಿಂದ ಕಂದಕಕ್ಕೆ ಉರುಳಿ ಬಿದ್ದಿದೆ.

ಇದನ್ನೂ ಓದಿ: ಹೊಸ ವರ್ಷದ ಸಂಭ್ರಮ: ಮುಲ್ಕಿಯ ಚಿತ್ರಾಪು ರೆಸಾರ್ಟ್ ಬಳಿ ಬಂದ ವ್ಯಕ್ತಿ ಹೊಳೆ ಪಾಲು

ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಸೋಲನ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details