ಕರ್ನಾಟಕ

karnataka

ETV Bharat / jagte-raho

ಬೈಕ್​​ಗೆ ಗುದ್ದಿದ ಲಾರಿ: ಒಂದೇ ಕುಟುಂಬದ ಮೂವರ ದುರ್ಮರಣ

ಹಿಂದಿನಿಂದ ಬಂದ ಸಿಮೆಂಟ್​ ತುಂಬಿದ್ದ ಲಾರಿ ಬೈಕ್​​ಗೆ ಗುದ್ದಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

road accident
ಒಂದೇ ಕುಟುಂಬದ ಮೂವರ ದುರ್ಮರಣ

By

Published : Sep 6, 2020, 12:33 PM IST

ಚಿತ್ತೂರು: ಬೈಕ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿದ್ದ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕೆವಿ ಪಲ್ಲಿ ಮಂಡಳದಲ್ಲಿ ನಡೆದಿದೆ.

ಮೃತರನ್ನು ಚಿನ್ನ ಗೊಟ್ಟಿಗಲ್ಲು ಗ್ರಾಮದ ಶಂಕರಯ್ಯ, ಅವರ ಪತ್ನಿ ರೆಡ್ಡೆಮ್ಮ ಹಾಗೂ ಅವರ ಪುತ್ರ ಅಖಿಲ್​ ಎಂದು ಗುರುತಿಸಲಾಗಿದೆ. ಬೈಕ್​ನಲ್ಲಿದ್ದ ಮೂವರು ಚಿತ್ತೂರಿನಿಂದ ಕಡಪ ಜಿಲ್ಲೆಗೆ ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಸಿಮೆಂಟ್​ ತುಂಬಿದ್ದ ಲಾರಿ ಗುದ್ದಿ ದುರಂತ ಸಂಭವಿಸಿದೆ.

ಮೃತದೇಹಗಳನ್ನು ಚಿತ್ತೂರು ಜಿಲ್ಲೆಯ ಪಿಲೇರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಇನ್ಸ್​ಪೆಕ್ಟರ್​ ಜಿ.ಶಿವಪ್ರಸಾದ್​ ರೆಡ್ಡಿ ತಿಳಿಸಿದ್ದಾರೆ.

ABOUT THE AUTHOR

...view details