ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ: ಇಬ್ಬರು ವಲಸೆ ಕಾರ್ಮಿಕರು ಸಾವು, 15 ಮಂದಿಗೆ ಗಾಯ - 2 migrant workers dead, over 15 injured in road mishap in Uttar Pradesh
ರಸ್ತೆ ಅಪಘಾತ
12:17 May 22
ಉತ್ತರ ಪ್ರದೇಶದಲ್ಲಿ ರಸ್ತೆ ಅಪಘಾತ: ಇಬ್ಬರು ವಲಸೆ ಕಾರ್ಮಿಕರು ಸಾವು, 15 ಮಂದಿಗೆ ಗಾಯ
ಉತ್ತರ ಪ್ರದೇಶ:ವಲಸೆ ಕಾರ್ಮಿಕರಿದ್ದ ಪಿಕಪ್ ವಾಹನವು ವಿದ್ಯುತ್ ಕಂಬಕ್ಕೆ ಗುದ್ದಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 15 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಬಿಜ್ನೋರ್ ಜಿಲ್ಲೆಯ ದೆಹಲಿ-ಬದೌನ್ ಹೆದ್ದಾರಿಯಲ್ಲಿ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯರು ಹಾಗೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ.
Last Updated : May 22, 2020, 1:24 PM IST