ಕರ್ನಾಟಕ

karnataka

ETV Bharat / jagte-raho

ಮಾನವ ಕಳ್ಳಸಾಗಣೆ: ರಾಂಚಿಯಲ್ಲಿ 14 ಬಾಲಕಿಯರ ರಕ್ಷಣೆ - ಜಾರ್ಖಂಡ್​ನ ರಾಂಚಿ ರೈಲ್ವೆ ನಿಲ್ದಾಣ

ಜಾರ್ಖಂಡ್​ನ ಲತೇಹರ್‌ನಿಂದ ಹೈದರಾಬಾದ್‌ಗೆ ರೈಲಿನಲ್ಲಿ ಕರೆದೊಯ್ಯಲಾಗುತ್ತಿದ್ದ 14 ಬಾಲಕಿಯರನ್ನು ರಾಂಚಿ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಸಂರಕ್ಷಣಾ ಪಡೆ ರಕ್ಷಿಸಿದೆ.

Human Trafficking
ಮಾನವ ಕಳ್ಳಸಾಗಣೆ

By

Published : Oct 3, 2020, 5:20 PM IST

ರಾಂಚಿ: ಜಾರ್ಖಂಡ್​ನ ರಾಂಚಿ ರೈಲ್ವೆ ನಿಲ್ದಾಣದಲ್ಲಿ 14 ಬಾಲಕಿಯರನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ರಕ್ಷಿಸಿದ್ದು, ಓರ್ವ ಮಹಿಳೆಯನ್ನು ಬಂಧಿಸಿದೆ.

ಅಪ್ರಾಪ್ತೆಯರನ್ನು ಜಾರ್ಖಂಡ್​ನ ಲತೇಹರ್‌ನಿಂದ ಹೈದರಾಬಾದ್‌ಗೆ ರೈಲಿನಲ್ಲಿ ಸಾಗಿಸಲಾಗುತ್ತಿತ್ತು. ರಾಂಚಿ ನಿಲ್ದಾಣದ ಪ್ರವೇಶದ್ವಾರದಲ್ಲಿ ಬಾಲಕಿಯರ ಗುಂಪನ್ನು ಗಮನಿಸಿರುವ ಆರ್‌ಪಿಎಫ್ ತಂಡವು ಎಚ್ಚೆತ್ತುಕೊಂಡಿದೆ. ಈ ಗುಂಪಿನಲ್ಲಿದ್ದ ಹುಡುಗಿಯೊಬ್ಬಳ ಬಳಿ ಆರ್‌ಪಿಎಫ್‌ನ ಮಹಿಳಾ ಸಿಬ್ಬಂದಿ ಎಲ್ಲಿಗೆ ಹೋಗುತ್ತಿದ್ದೀರಾ ಎಂದು ಕೇಳಿದಾಗ ಆಕೆ ಉತ್ತರಿಸಲಿಲ್ಲ.

ಈ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನಿಸಿದ ಆರ್‌ಪಿಎಫ್ ತಂಡ ಬಾಲಕಿಯರನ್ನು ರಕ್ಷಿಸಿ ವಿಚಾರಣೆಗೊಳಪಡಿಸಿದೆ. ಈ ವೇಳೆ, ಮೀನಾ ದೇವಿ ಎಂಬ ಮಹಿಳೆ ಅವರನ್ನು ಹೊಲಿಗೆ ತರಬೇತಿಗೆಂದು ಸುಳ್ಳು ಹೇಳಿ ಕರೆದೊಯ್ಯುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ.

ಈ ಬಗ್ಗೆ ಮೀನಾ ದೇವಿಯನ್ನು ವಿಚಾರಿಸಿದರೆ, ಆಕೆಗೆ ಯಾವುದೇ ಸಂಸ್ಥೆಯ ಹೆಸರನ್ನು ಉಲ್ಲೇಖಿಸಲು ಅಥವಾ ಯಾವುದೇ ಕಾನೂನು ದಾಖಲೆಗಳನ್ನು ಸಲ್ಲಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮೀನಾ ದೇವಿಯನ್ನು ಬಂಧಿಸಿದ ಪೊಲೀಸರು ಮಾನವ ಕಳ್ಳಸಾಗಣೆ ಹಿಂದಿನ ಜಾಲವನ್ನು ಪತ್ತೆ ಹಚ್ಚುತ್ತಿದ್ದಾರೆ.

ABOUT THE AUTHOR

...view details