ಕರ್ನಾಟಕ

karnataka

ETV Bharat / jagte-raho

ಕಾಮುಕರ ಅಟ್ಟಹಾಸಕ್ಕೆ 12 ವರ್ಷದ ಬಾಲಕಿ ಬಲಿ - ಬುಡಕಟ್ಟು ಸಮುದಾಯದ ಬಾಲಕಿ ಮೇಲೆ ರೇಪ್​

ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದು, ಆಕೆಯ ಮೇಲೆ ಅತ್ಯಾಚಾರವೆಸಗಿ ಕಾಮುಕರು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

gangrape
ಅತ್ಯಾಚಾರ

By

Published : Oct 17, 2020, 12:37 PM IST

ಡುಮ್ಕಾ (ಜಾರ್ಖಂಡ್​):ಬುಡಕಟ್ಟು ಸಮುದಾಯದ 12 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಕಾಮುಕರು, ಆಕೆಯನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್​ನ ಡುಮ್ಕಾದಲ್ಲಿ ನಡೆದಿದೆ.

ಟ್ಯೂಷನ್​ಗೆ ತೆರಳಿದ್ದ ಐದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕಿ ಡುಮ್ಕಾದ ರಾಮ್​ಗರ್​ನ ಚಿಡಿ ಗ್ರಾಮದಲ್ಲಿ ಪೊದೆಗಳ ನಡುವೆ ಶವವಾಗಿ ಪತ್ತೆಯಾಗಿದ್ದಳು. ಪ್ರಾಥಮಿಕ ತನಿಖೆಯ ಪ್ರಕಾರ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದು, ಬಳಿಕ ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸತ್ಯ ತಿಳಿಯಲಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದು, ವಿಶೇಷ ತನಿಖಾ ತಂಡ (SIT)ವನ್ನು ರಚಿಸಲಾಗಿದೆ ಎಂದು ಪೊಲೀಸ್​ ವರಿಷ್ಠಾಧಿಕಾರಿ ಅಂಬೇರ್​ ಲಕ್ರಾ ತಿಳಿಸಿದ್ದಾರೆ.

ಈ ಸಂಬಂಧ ಕಠಿಣ ಕ್ರಮ ಕೈಗೊಳ್ಳುವಂತೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್​ ಸೊರೇನ್​ ಆದೇಶ ನೀಡಿದ್ದಾರೆ. ಅಲ್ಲದೆ ಆರೋಪಿಗಳಿಗೆ ತ್ವರಿತವಾಗಿ ಶಿಕ್ಷೆ ಪ್ರಕಟಿಸಲು ಇಂತಹ ಪ್ರಕರಣಗಳನ್ನು ಫಾಸ್ಟ್​ ಟ್ರಾಕ್​ ಕೋರ್ಟ್​ಗಳಿಗೆ ನೀಡುವಂತೆ ಸಿಎಂ ಎಲ್ಲಾ ಜಿಲ್ಲಾಡಳಿತಗಳಿಗೆ ಸೂಚಿಸಿದ್ದಾರೆ.

ABOUT THE AUTHOR

...view details