ಜೋಧ್ಪುರ (ರಾಜಸ್ಥಾನ): 9 ತಿಂಗಳ ಹಿಂದೆ ರಾಜಸ್ಥಾನದ ಜೋಧ್ಪುರ ಜಿಲ್ಲೆಯ 12 ವರ್ಷದ ಬಾಲಕಿ ಮೇಲೆ ನೆರೆಹೊರೆಯ 30 ವರ್ಷದ ವ್ಯಕ್ತಿಯೊಬ್ಬ ಅತ್ಯಾಚಾರ ಎಸಗಿದ್ದನು. ಇದೀಗ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಅತ್ಯಾಚಾರ ನಡೆದ ವೇಳೆ ಅಪ್ರಾಪ್ತೆ ಭಯಗೊಂಡು ಪೋಷಕರಲ್ಲಿ ವಿಷಯ ತಿಳಿಸಿರಲಿಲ್ಲ. ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಿಸಿದಾಗ ಆಕೆ ಗರ್ಭವತಿ ಎಂಬುದು ತಿಳಿದು ಬಂದಿದೆ. ಬಳಿಕ ಬಾಲಕಿ ಪೋಷಕರ ಹತ್ತಿರ ನಡೆದ ಘಟನೆಯನ್ನು ಹೇಳಿಕೊಂಡಿದ್ದಾಳೆ.