ಕರ್ನಾಟಕ

karnataka

ETV Bharat / jagte-raho

ಪ್ರತ್ಯೇಕ ಪ್ರಕರಣ.. 12 ಕೆಜಿ ಗಾಂಜಾ, ಕಳ್ಳಸಾಗಣೆ ಮಾಡುತ್ತಿದ್ದ 2000 ಕೆಜಿ ಅರಿಶಿಣ ವಶಕ್ಕೆ - ಕೋಲ್ಕತ್ತಾದಲ್ಲಿ ಕಾರಿನ ಸೀಟ್​ನಡಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ

ಕೋಲ್ಕತ್ತಾದಲ್ಲಿ ಕಾರಿನ ಸೀಟ್​ನಡಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾ ಹಾಗೂ ರಾಮನಾಥಪುರಂ ಜಿಲ್ಲೆಯಲ್ಲಿ ಶ್ರೀಲಂಕಾಕ್ಕೆ ಕಳ್ಳಸಾಗಣೆ ಮಾಡಲಾಗುತ್ತಿದ್ದ ಕ್ವಿಂಟಲ್‌ಗಟ್ಟಲೆ ಅರಿಶಿಣವನ್ನು ವಶಪಡಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ..

12 kg of cannabis seized in Kolkata
12 ಕೆಜಿ ಗಾಂಜಾ, ಕಳ್ಳಸಾಗಣೆ ಮಾಡುತ್ತಿದ್ದ 2000 ಕೆಜಿ ಅರಿಶಿಣ ವಶಕ್ಕೆ

By

Published : Nov 1, 2020, 11:56 AM IST

ಕೋಲ್ಕತ್ತಾ/ರಾಮನಾಥಪುರಂ :ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಪೊಲೀಸರು 12 ಕೆಜಿ ಗಾಂಜಾ ಹಾಗೂ 2000 ಕೆಜಿ ಅರಿಶಿಣ ವಶಪಡಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಕೋಲ್ಕತ್ತಾದ ರೀಜೆಂಟ್ ಪಾರ್ಕ್ ಬಳಿ ಕಾರೊಂದನ್ನು ಅಡ್ಡಗಟ್ಟಿದ ಪೊಲೀಸರು, ಕಾರಿನ ಸೀಟ್​ನಡಿ ಅಡಗಿಸಿಟ್ಟಿದ್ದ 12 ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. ಕಾರಿನಲ್ಲಿದ್ದ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನೊಬ್ಬ ಪರಾರಿಯಾಗಿದ್ದಾನೆ.

ಇನ್ನು, ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿ ಶ್ರೀಲಂಕಾಗೆ ಕಳ್ಳಸಾಗಣೆ ಮಾಡಲಾಗುತ್ತಿದ್ದ 2000 ಕೆಜಿ ಅರಿಶಿಣ ವಶಪಡಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details