ಭೋಪಾಲ್:ಗಣಪತಿ ನಿಮಜ್ಜನದ ವೇಳೆ ಬೋಟ್ ಮಗುಚಿ ಭಾರಿ ದುರಂತ ಸಂಭವಿಸಿದ್ದು, 11 ಮಂದಿ ಜಲಸಮಾಧಿ ಆಗಿದ್ದಾರೆ. ಇಂದು ಬೆಳಗ್ಗೆ ಭೋಪಾಲ್ನ ಕತ್ಲಾಪುರ ಘಾಟ್ನಲ್ಲಿ ಈ ಅವಘಡ ನಡೆದಿದೆ.
ಈಗಾಗಲೇ 11 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ನೀರಿನಲ್ಲಿ ಮುಳುಗಿರುವ ಇನ್ನಿಬ್ಬರಿಗಾಗಿ ಶೋಧಕಾರ್ಯ ಮುಂದುವರಿದಿದೆ. ಇದೇ ವೇಳೆ ಬೋಟ್ ಮುಳುಗುತ್ತಿದ್ದಂತೆ 6 ಮಂದಿಯನ್ನು ರಕ್ಷಿಸಲಾಗಿದೆ.