ಕರ್ನಾಟಕ

karnataka

ETV Bharat / international

ಮುಂದಿನ ವಾರ ಅಮೆರಿಕಕ್ಕೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಭೇಟಿ - ವಾಷಿಂಗ್ಟನ್

Zelenskyy's plans to visit White House: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಮೆರಿಕಕ್ಕೆ ಭೇಟಿ ನೀಡಲಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಮೆರಿಕ
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಮೆರಿಕ

By ETV Bharat Karnataka Team

Published : Sep 16, 2023, 11:33 AM IST

ವಾಷಿಂಗ್ಟನ್( ಅಮೆರಿಕ):ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಮೆರಿಕ ಶ್ವೇತಭವನ ಹಾಗೂ ಕ್ಯಾಪಿಟಲ್ ಹಿಲ್​ಗೂ ಮುಂದಿನ ವಾರ ಭೇಟಿ ನೀಡಲಿದ್ದಾರೆ. ಅಮೆರಿಕವು, ರಷ್ಯಾದ ಆಕ್ರಮಣದ ವಿರುದ್ಧ ಹೋರಾಡುತ್ತಿರುವ ಉಕ್ರೇನ್‌ಗೆ 24 ಬಿಲಿಯನ್ ಡಾಲರ್​ ಮಿಲಿಟರಿ ಮತ್ತು ಮಾನವೀಯ ನೆರವು ನೀಡಲು ಮುಂದಾಗಿದೆ. ಈ ಬಗ್ಗೆ ಅಮೆರಿಕದ ಸಂಸತ್​ನಲ್ಲಿ ಚರ್ಚೆ ನಡೆಯುತ್ತಿದೆ. ಈ ಸಮಯದಲ್ಲಿ ಉಕ್ರೇನ್ ಅಧ್ಯಕ್ಷರ ಅಮೆರಿಕ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ಭೇಟಿಯ ಕುರಿತು ಅಮೆರಿಕ ಅಧ್ಯಕ್ಷರ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಜೇಕ್ ಸುಲ್ಲಿವಾನ್ ಶ್ವೇತಭವನದಲ್ಲಿ ಶುಕ್ರವಾರ 'ಜೋ ಬೈಡನ್​ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅವರ ಆತಿಥ್ಯವಹಿಸಲಿದ್ದಾರೆ' ಎನ್ನುವ ಮೂಲಕ ಭೇಟಿಯನ್ನು ಧೃಡಪಡಿಸಿದ್ದಾರೆ.

ಉಕ್ರೇನ್​ ಅಧ್ಯಕ್ಷ ಝೆಲೆನ್​ಸ್ಕಿ ಒಟ್ಟು 3 ಬಾರಿ ಜೋ ಬೈಡನ್ ಅವರನ್ನು ಭೇಟಿ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಉಕ್ರೇನ್​ ಅಧ್ಯಕ್ಷರೊಬ್ಬರು ಶ್ವೇತಭವನಕ್ಕೆ ಮೂರನೇ ಬಾರಿಗೆ ಭೇಟಿ ನೀಡುತ್ತಿರುವುದು ವಿಶೇಷ. ಉಕ್ರೇನ್​ ಮೇಲೆ ಯುದ್ಧ ಮುಂದುವರಿಸಲು ರಷ್ಯಾ ನಿರ್ಧರಿಸಿದ್ದು, ಉತ್ತರ ಕೊರಿಯಾದಂತಹ ದೇಶಗಳಿಂದ ಸಹಾಯಕ್ಕೆ ಮುಂದಾಗುತ್ತಿದೆ. ಹೀಗಾಗಿ ಉಕ್ರೇನ್​​ ಸಹ ತನ್ನ ನೆಲವನ್ನು ಉಳಿಸಿಕೊಳ್ಳುವುದಕ್ಕಾಗಿ ರಷ್ಯಾ ವಿರುದ್ಧ ಹೋರಾಟ ಮುಂದುವರಿಸಿದೆ. ಈ ನಡುವೆ ಅದು ಅಮೆರಿಕ ಮತ್ತು ಯುರೋಪಿಯನ್​ ಯೂನಿಯನ್​ ನೆರವು ಪಡೆದುಕೊಳ್ಳಲು ಮುಂದಾಗುತ್ತಿದೆ.

ಈ ನಡುವೆ ಉಕ್ರೇನ್​​​​​​​​​ ರಕ್ಷಣಾ ಕಾರ್ಯದರ್ಶಿ ಆಸ್ಟಿನ್​​​​​ ಯುದ್ಧದ ಬಗ್ಗೆ ಯುರೋಪಿಯನ್​ ಯೂನಿಯನ್​ ಸೇರಿದಂತೆ ಇತರ ರಕ್ಷಣಾ ಪಡೆಗಳ ಜತೆ ಮುಂದಿನ ವಾರ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಅಮೆರಿಕ ಭದ್ರತಾ ಸಲಹೆಗಾರ ಸುಲಿವಾನ್​​ ಸಹ ಇದನ್ನು ದೃಢಪಡಿಸಿದ್ದಾರೆ.

ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್​ಸ್ಕಿ ಅಮೆರಿಕ ಭೇಟಿಯನ್ನು ಅಮೆರಿಕನ್​ ಭದ್ರತಾ ಸಲಹೆಗಾರ ಸುಲಿವಾನ್ ದೃಢಪಡಿಸಿದ್ದು, ಶ್ವೇತಭವನದಲ್ಲಿ ಅಧ್ಯಕ್ಷ ಜೋ ಬೈಡನ್​ ಅವರನ್ನು ನೋಡುವ ಅವಕಾಶಕ್ಕಾಗಿ ಎದುರು ನೋಡುತ್ತಿದ್ದಾರೆಂದು ನಾನು ಭಾವಿಸುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಇನ್ನು ಇದಕ್ಕೂ ಹಿಂದೆ ರಷ್ಯಾದೊಂದಿಗೆ ಯುದ್ಧದಲ್ಲಿ ನಿರತವಾಗಿರುವ ಉಕ್ರೇನ್​ಗೆ ಅಮೆರಿಕ 250 ಮಿಲಿಯನ್ ಡಾಲರ್ ಮೌಲ್ಯದ ಹೆಚ್ಚುವರಿ ಮಿಲಿಟರಿ ನೆರವು ಘೋಷಿಸಿತ್ತು. ಹೊಸ ಮಿಲಿಟರಿ ಪ್ಯಾಕೇಜ್​ ವಾಯು ರಕ್ಷಣೆಗಾಗಿ ಎಐಎಂ -9 ಎಂ ಕ್ಷಿಪಣಿಗಳು, ಹೈ ಮೊಬಿಲಿಟಿ ಆರ್ಟಿಲರಿ ರಾಕೆಟ್ ಸಿಸ್ಟಮ್​ ಶಸ್ತ್ರಾಸ್ತ್ರಗಳು, 155 ಎಂಎಂ ಮತ್ತು 105 ಎಂಎಂ ಫಿರಂಗಿ ಮದ್ದುಗುಂಡುಗಳು ಮತ್ತು 3 ಮಿಲಿಯನ್ ಸುತ್ತು ಸಣ್ಣ ಶಸ್ತ್ರಾಸ್ತ್ರ ಮದ್ದುಗುಂಡುಗಳು ಸೇರಿವೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಹೇಳಿಕೆಯಲ್ಲಿ ತಿಳಿಸಿದ್ದರು.

ಇದನ್ನೂ ಓದಿ:ಉಕ್ರೇನ್​ಗೆ ಮತ್ತೆ 1 ಬಿಲಿಯನ್ ಡಾಲರ್​ ನೆರವು ನೀಡಿದ ಅಮೆರಿಕ

ABOUT THE AUTHOR

...view details