ಕರ್ನಾಟಕ

karnataka

ETV Bharat / international

ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 8 ಕಾರ್ಮಿಕರ ಹತ್ಯೆ.. ಬ್ಯಾಗ್​​​​​​ನಲ್ಲಿ ಪತ್ತೆಯಾದ್ವು ಶವ! - ಹಿಂಸಾತ್ಮಕ ಡ್ರಗ್ ಕಾರ್ಟೆಲ್

ಹಿಂಸಾತ್ಮಕ ಡ್ರಗ್ ಕಾರ್ಟೆಲ್ ನಿರ್ವಹಿಸುವ ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುವ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಎಂಟು ಜನರು ಮೇ 20 ಮತ್ತು ಮೇ 22 ರ ನಡುವೆ ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಪ್ಲಾಸ್ಟಿಕ್ ಚೀಲಗಳಲ್ಲಿ ಕಂಡು ಬಂದ ಶವಗಳ ಹಿನ್ನೆಲೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

8 young workers at drug cartel call center killed, bodies placed in bags
ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 8 ಕಾರ್ಮಿಕರ ಹತ್ಯೆ.. ಬ್ಯಾಗ್​​​​​​ನಲ್ಲಿ ಪತ್ತೆಯಾದ್ವು ಶವ!

By

Published : Jun 7, 2023, 9:34 AM IST

ಮೆಕ್ಸಿಕೋ ಸಿಟಿ:ರಿಯಲ್ ಎಸ್ಟೇಟ್ ಹಗರಣದಲ್ಲಿ ಅಮೆರಿಕನ್ನರನ್ನು ಗುರಿಯಾಗಿಸಿಕೊಂಡು ಹಿಂಸಾತ್ಮಕ ಡ್ರಗ್ ಕಾರ್ಟೆಲ್ ನಲ್ಲಿ ಸಿಲುಕಿದ್ದ ಎಂಟು ಯುವ ಕಾರ್ಮಿಕರು ಮೆಕ್ಸಿಕೊದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಂಗಳವಾರ ದೃಢಪಡಿಸಲಾಗಿದೆ.

ಅಮೆರಿಕ ಮತ್ತು ಮೆಕ್ಸಿಕನ್ ಅಧಿಕಾರಿಗಳು ಕಳೆದ ತಿಂಗಳ ಕೊನೆಯಲ್ಲಿ ನಡೆದ ದುರ್ಘಟನೆ ಬಗ್ಗೆ ದೃಢಪಡಿಸಿದ್ದಾರೆ. ಯುವಕರ ಸಂಬಂಧಿಕರು ಕಚೇರಿ ಕೆಲಸಕ್ಕೆ ಹೋದವರು ಮನೆಗೆ ಮರಳದೇ ಕಾಣೆಯಾಗಿದ್ದಾರೆ ಎಂದು ತಿಳಿಸಿದ್ದರು. ಆದರೆ, ಕಳೆದ ವಾರ ಪ್ಲಾಸ್ಟಿಕ್ ಚೀಲಗಳಲ್ಲಿ ಕತ್ತರಿಸಿದ ದೇಹದ ಭಾಗಗಳ ರಾಶಿ ಕಂಡು ಬಂದ ಮೇಲೆ ಅನುಮಾನಗಳು ಹೆಚ್ಚಾಗಿದ್ದವು.

ಈ ನಡುವೆ ಮೃತದೇಹಗಳು ನಾಪತ್ತೆಯಾದ ಕಾಲ್ ಸೆಂಟರ್ ಕೆಲಸಗಾರರದ್ದು ಎಂಬುದು, ಶವಗಳ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿವೆ. ಪಶ್ಚಿಮ ರಾಜ್ಯ ಜಲಿಸ್ಕೊದಲ್ಲಿ ಫೋರೆನ್ಸಿಕ್ ತಜ್ಞರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮೇ 20 ಮತ್ತು ಮೇ 22 ರ ನಡುವೆ ಒಟ್ಟು ಆರು ಪುರುಷರು ಮತ್ತು ಇಬ್ಬರು ಮಹಿಳೆಯರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಆದರೆ ಫೋರೆನ್ಸಿಕ್ ತಜ್ಞರು ಎಷ್ಟು ಮಂದಿ ಶವಗಳು ಸಿಕ್ಕಿವೆ ಎಂಬ ಉಲ್ಲೇಖಿಸಿಲ್ಲ.

ನಾಪತ್ತೆಯಾಗಿದ್ದ ಉದ್ಯೋಗಿಗಳ ಪೋಷಕರು, ತಮ್ಮ ಮಕ್ಕಳು ಕಾಲ್​​​​ ಸೆಂಟರ್​​ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ನಂಬಿದ್ದರು. ಆದರೆ, ಈ ಕಚೇರಿ ವಾಸ್ತವವಾಗಿ ಮೆಕ್ಸಿಕೊದ ಅತ್ಯಂತ ಹಿಂಸಾತ್ಮಕ ಗ್ಯಾಂಗ್ ಜಲಿಸ್ಕೊದಲ್ಲಿ ನ್ಯೂ ಜನರೇಷನ್ ಕಾರ್ಟೆಲ್ ನಡೆಸುತ್ತಿದೆ ಎಂಬ ಮಾಹಿತಿ ಇರಲಿಲ್ಲ. ಕಾರ್ಟೆಲ್ ತನ್ನ ಸಾಂಪ್ರದಾಯಿಕ ವ್ಯಾಪಾರವಾದ ಮಾದಕವಸ್ತು ಕಳ್ಳಸಾಗಣೆ, ಸುಲಿಗೆ ಮತ್ತು ಅಪಹರಣದಂತ ದಂಧೆಗಳನ್ನು ನಿರ್ವಹಿಸುವ ಸಂಸ್ಥೆ ಎಂದು ಅಧಿಕಾರಿಗಳು ಈಗ ದೃಢ ಪಡಿಸಿದ್ದಾರೆ.

ಕಾಲ್​​ ಸೆಂಟರ್​ನಿಂದ ನಾಪತ್ತೆಯಾಗಿ ಕೊಲೆ ಆಗಿರುವವರಲ್ಲಿ ಇಬ್ಬರನ್ನು ಹೊರತುಪಡಿಸಿ ಇನ್ನುಳಿದವರೆಲ್ಲ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ ಕಾನೂನು ತೊಡಕು ಇರುವುದರಿಂದ ಸಾರ್ವಜನಿಕವಾಗಿ ಮಾತನಾಡಲು ಇಚ್ಚಿಸದ ಅಧಿಕಾರಿಯೊಬ್ಬರು, ಅನಾಮಧೇಯತೆಯ ಷರತ್ತಿನ ಮೇಲೆ ಮಾತನಾಡಿದ್ದು, ಯುವಕರನ್ನು ಕೊಲ್ಲಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಕಾಲ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದ ಯುವಕರು ತಮ್ಮ ಕೆಲಸವನ್ನು ತೊರೆಯುವ ಉದ್ದೇಶ ಹೊಂದಿದ್ದರು. ಈ ಬಂಧನದಿಂದ ಹೊರ ಬರಬೇಕೆಂದು ನಿರ್ಧರಿಸಿದ್ದೇ ಅವರ ಕೊಲೆ ಕಾರಣ ಎಂಬ ಅಂಶವನ್ನು ಹೆಸರು ಹೇಳಲಿಚ್ಚಿಸದ ಅಧಿಕಾರಿ ಹೇಳಿದ್ದಾರೆ.

ವಿಶೇಷ ಎಂದರೆ ಮೆಕ್ಸಿಕೋದಲ್ಲಿ ಸುಮಾರು 15 ಸಾವಿರ ಜನ ಕಾಣೆಯಾಗಿದ್ದಾರೆ ಎಂದು ಹೇಳಲಾಗುತ್ತದೆ. ಇನ್ನೂ ವಿಶೇಷ ಎಂದರೆ ಜಾಲಿಸ್ಕೋದಲ್ಲಿ ಈ ಕಂಪನಿ ಮೆಕ್ಸಿಕೋದಾದ್ಯಂತ ಹರಡಿದ್ದು, ಈ ಕಂಪನಿಯಲ್ಲಿ ಸುಮಾರು 1.2 ಲಕ್ಷ ಕೆಲಸಗಾರರಿದ್ದಾರೆ ಎಂದು ಶಂಕಿಸಲಾಗಿದೆ. ಇವರೆಲ್ಲ ಇಂಗ್ಲಿಷ್​ ಕಲಿಯಲು ಅಮೆರಿಕಕ್ಕೆ ತೆರಳಿ, ಇಂಗ್ಲಿಷ್​ ಕಲಿತು ಮೆಕ್ಸಿಕೊಗೆ ವಾಪಸ್​ ಆಗುತ್ತಾರೆ. ಅಲ್ಲಿಂದ ಬಂದವರಿಗೆ ಈ ಕಂಪನಿಯೇ ಉದ್ಯೋಗದ ಮೂಲವಾಗಿದೆ.

ಕಳೆದ ಏಪ್ರಿಲ್​​ನಲ್ಲಿ ಅಮೆರಿಕ ಸರ್ಕಾರ ಜಲಿಸ್ಕೋ ನ್ಯೂ ಜನರೇಷನ್ ಕಾರ್ಟೆಲ್‌ನ ಸದಸ್ಯರು ಅಥವಾ ಸಹವರ್ತಿಗಳ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದಾಗ, ಅದರ ವಂಚನೆಗಳು ಬೆಳಕಿಗೆ ಬಂದಿದೆ. ಈ ಸಂಬಂಧ ಭಯೋತ್ಪಾದನೆ ಮತ್ತು ಹಣಕಾಸು ಗುಪ್ತಚರ ವಿಭಾಗದ ಅಮೆರಿಕ ಅಧೀನ ಕಾರ್ಯದರ್ಶಿ ಬ್ರಿಯಾನ್ ಇ. ನೆಲ್ಸನ್ ಮಾತನಾಡಿದ್ದರು. "ಪೋರ್ಟೊ ವಲ್ಲರ್ಟಾ ಪ್ರದೇಶದಲ್ಲಿ ಮತ್ತು ಇತರೆಡೆಗಳಲ್ಲಿ ಟೈಮ್‌ಶೇರ್ ವಂಚನೆಯಲ್ಲಿ CJNG ಯ ಆಳವಾದ ಒಳಗೊಳ್ಳುವಿಕೆ ಇತ್ತು. ಇದು ಸಾಮಾನ್ಯವಾಗಿ ವಯಸ್ಸಾದ US ನಾಗರಿಕರನ್ನು ಗುರಿಯಾಗಿಸಿಕೊಂಡು ವಂಚಿಸಬಹುದು ಎಂದಿದ್ದರು.

2022 ರ FBI ವರದಿ ಪ್ರಕಾರ, ಏಜೆನ್ಸಿಯ ಇಂಟರ್ನೆಟ್ ಅಪರಾಧ ದೂರು ಕೇಂದ್ರವು "ಮೆಕ್ಸಿಕೋದಲ್ಲಿ ಟೈಮ್‌ಶೇರ್‌ ಮಾಲೀಕತ್ವದ ಸ್ಕ್ಯಾಮರ್‌ಗಳು, ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡಿದೆ. ಹೀಗೆ ವಂಚನೆಗೊಳಗಾದ ಸಂತ್ರಸ್ತರಿಂದ ಸರಿಸುಮಾರು 600 ಕ್ಕೂ ಹೆಚ್ಚು ದೂರುಗಳನ್ನು ಸ್ವೀಕರಿಸಿದೆ. ಈ ಮೂಲಕ $39.6 ಮಿಲಿಯನ್ ನಷ್ಟವನ್ನು ಅಲ್ಲಿನ ಜನ ಅನುಭವಿಸಿದ್ದಾರೆ.

ಇದನ್ನು ಓದಿ:ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಶಾಶ್ವತವಲ್ಲದ ಸ್ಥಾನಕ್ಕೆ ಐದು ರಾಷ್ಟ್ರಗಳ ಆಯ್ಕೆ

ABOUT THE AUTHOR

...view details