ಮ್ಯಾಡ್ರೀಡ್( ಸ್ಪೇನ್) :ಈಗ ಸ್ಪೇನ್‌ನಲ್ಲಿ ವಾಸಿಸುತ್ತಿರುವ ಯುಎಸ್‌ನಲ್ಲಿ ಜನಿಸಿದ ವಿಶ್ವದ ಅತ್ಯಂತ ವಯೋವೃದ್ಧ ಮಹಿಳೆ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಎರಡೂ ವಿಶ್ವಯುದ್ಧಗಳು, ಸ್ಪ್ಯಾನಿಷ್ ಅಂತರ್ಯುದ್ಧ ಮತ್ತು ಸ್ಪ್ಯಾನಿಷ್ ಫ್ಲೂ ಸಾಂಕ್ರಾಮಿಕ ಮತ್ತು 2020 ರಲ್ಲಿ ಕೋವಿಡ್-19 ಈ ಎಲ್ಲ ಯುಗಗಳನ್ನೂ ಜೀವಂತವಾಗಿ ಕಂಡು ಇನ್ನೂ ಬದುಕಿದ್ದಾರೆ. ಗಿನ್ನೆಸ್ ವಿಶ್ವ ದಾಖಲೆಗಳ ಪ್ರಕಾರ ಈ ಮಾಹಿತಿ ನೀಡಲಾಗಿದೆ. 118 ವರ್ಷ ವಯಸ್ಸಿನ ಲುಸಿಲ್ ರಾಂಡನ್ ಅವರ ಮರಣದ ನಂತರ ಮಾರಿಯಾ ಬ್ರನ್ಯಾಸ್ ಮೊರೆರಾ ಅವರು ಈಗ ಜೀವಂತವಿರುವ ವಿಶ್ವದ ಅತ್ಯಂತ ಹಿರಿಯ ಮಹಿಳೆ ಮತ್ತು ಅತ್ಯಂತ ಹಿರಿಯ ವ್ಯಕ್ತಿ ಎಂದು ಗುರುತಿಸಲಾಗಿದೆ.
"ನನಗೆ ವಯಸ್ಸಾಗಿದೆ, ತುಂಬಾ ವಯಸ್ಸಾಗಿದೆ, ಆದರೆ ನಾನು ಈಡಿಯಟ್ ಅಲ್ಲ" ಎಂದು ಅವರ ಟ್ವಿಟರ್ ಬಯೋದಲ್ಲಿ ಬರೆಯಲಾಗಿದೆ. ಅಜ್ಜಿಯ ಪೋಷಕರು ಅಮೆರಿಕಕ್ಕೆ ವಲಸೆ ಹೋದ ಒಂದು ವರ್ಷದ ನಂತರ ಕ್ಯಾಲಿಫೋರ್ನಿಯಾದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ 4 ಮಾರ್ಚ್ 1907 ರಂದು ಮಾರಿಯಾ ಜನಿಸಿದರು. ಎಂಟು ವರ್ಷಗಳ ನಂತರ, ಅವರು ಸ್ಪೇನ್‌ಗೆ ಮರಳಲು ನಿರ್ಧರಿಸಿದರು. ನಂತರ ಅಲ್ಲಿ ಅವರು ಕ್ಯಾಟಲೋನಿಯಾದಲ್ಲಿ ನೆಲೆಸಿದರು. ಜನವರಿ 20, 2023 ರಲ್ಲಿದ್ದಂತೆ ಮೊರೆರಾ ಅವರಿಗೆ 115 ವರ್ಷ 322 ದಿನ ವಯಸ್ಸಾಗಿದೆ.
ಪ್ರಸ್ತುತ, ಮಾರಿಯಾ ರೆಸಿಡೆನ್ಸಿಯಾ ಸಾಂಟಾ ಮರಿಯಾ ಡೆಲ್ ತುರಾದಲ್ಲಿ ವಾಸಿಸುತ್ತಿದ್ದಾರೆ. ಇದು ಕಳೆದ 22 ವರ್ಷಗಳಿಂದ ಅವರ ಮನೆಯಾಗಿದೆ. ಅವರು ಉತ್ತಮ ಆರೋಗ್ಯವನ್ನು ಹೊಂದಿದ್ದಾರೆ ಮತ್ತು ಈ ಬಾರಿಯ ಹುಟ್ಟುಹಬ್ಬವು ಜಗತ್ತಿನ ಗಮನ ಸೆಳೆದಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿರುವ ಅವರು ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಗುರುವಾರ ಹೇಳಿದೆ. ಮಾರಿಯಾ ಅವರು ವಿಶ್ವದ ಅತ್ಯಂತ ಹಿರಿಯ ಜೀವಂತ ವ್ಯಕ್ತಿಯಾಗಿದ್ದಾರೆ. ಇದು ಸಂಭ್ರಮಕ್ಕೂ ಕಾರಣವಾಗಿದೆ. ಈ ವಿಶೇಷವಾದ ಈವೆಂಟ್ ಅನ್ನು ಆಚರಿಸಲು ನಾವು ಮುಂದಿನ ದಿನಗಳಲ್ಲಿ ಮನೆಯಲ್ಲಿಯೇ ಸಣ್ಣ ಆಚರಣೆ ಮಾಡುತ್ತೇವೆ ಎಂದು ಅವರ ಕುಟುಂಬಸ್ಥರು ಹೇಳಿದ್ದಾರೆ.