ಕರ್ನಾಟಕ

karnataka

ETV Bharat / international

ಇದು ಪ್ರಪಂಚದ ಅತ್ಯಂತ ದುಬಾರಿ ದಿಂಬು..ವಜ್ರ,ವೈಡೂರ್ಯಗಳಿಂದ ಕೂಡಿದ ಇದರ ಬೆಲೆ ಎಷ್ಟು ಅಂತೀರಾ?! - ವಿಶ್ವದ ಅತ್ಯಂತ ದುಬಾರಿ ಮೆತ್ತೆ ವಿಶೇಷತೆ

ನೆದರ್​​​ಲ್ಯಾಂಡ್​​ನ ಪರಿಣಿತರೊಬ್ಬರು ವಿಶೇಷವಾದ ದಿಂಬು ತಯಾರಿಸಿದ್ದಾರೆ. ಈ ಅತ್ಯಾಧುನಿಕ ದಿಂಬನ್ನು ನೀಲಮಣಿಗಳು, ವಜ್ರಗಳು, ಚಿನ್ನ, ಮಲ್ಬೆರಿ ರೇಷ್ಮೆ ಮತ್ತು ಇತರ ಅನೇಕ ಅಮೂಲ್ಯ ವಸ್ತುಗಳಿಂದ ತಯಾರು ಮಾಡಿದ್ದಾರೆ. ಈ ಬಗ್ಗೆ ಡಿಸೈನರ್ ಥೀಜ್ ವ್ಯಾನ್ ಡೆರ್ ಹಿಲ್ಟ್ಸ್ ಏನ್​ ಹೇಳ್ತಾರೆ ನೋಡೊಣಾ ಬನ್ನಿ..

world most expensive pillow, worlds most expensive pillow costs, worlds most expensive pillow speciality, worlds most expensive pillow news, ವಿಶ್ವದ ಅತ್ಯಂತ ದುಬಾರಿ ದಿಂಬು, ವಿಶ್ವದ ಅತ್ಯಂತ ದುಬಾರಿ ದಿಂಬಿನ ವೆಚ್ಚ, ವಿಶ್ವದ ಅತ್ಯಂತ ದುಬಾರಿ ಮೆತ್ತೆ ವಿಶೇಷತೆ, ವಿಶ್ವದ ಅತ್ಯಂತ ದುಬಾರಿ ಮೆತ್ತೆ ಸುದ್ದಿ,
ಕೃಪೆ : Youtube

By

Published : Jun 27, 2022, 7:39 AM IST

ನೆದರ್ಲೆಂಡ್: ನೀವು ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಈ ದಿಂಬು ನಿಮಗೆ ಚೆನ್ನಾಗಿ ನಿದ್ದೆ ಮಾಡಲು ಅನುಕೂಲ ಮಾಡುತ್ತದೆ. ಈ ದಿಂಬನ್ನು ಹೈಟಕ್​ ಪರಿಹಾರಗಳು ಮತ್ತು ವಿಂಟೇಜ್​ ಕರಕುಶ ವಸ್ತುಗಳಿಂದ ಮಾಡಲಾಗಿದೆ. ಆದರೆ ಈ ದಿಂಬು ಅತ್ಯಂತ ದುಬಾರಿಯಾಗಿದೆ.

ಪ್ರಪಂಚದ ಅತ್ಯಂತ ದುಬಾರಿ ದಿಂಬನ್ನು ತಯಾರಿಸಿದ್ದು ಡಿಸೈನರ್ ಥೀಜ್ ವ್ಯಾನ್ ಡೆರ್ ಹಿಲ್ಟ್ಸ್. ಅವರು ಈ ವಿಶಿಷ್ಟ ದಿಂಬನ್ನು ತಯಾರಿಸಲು ಅವರ ತಂಡ 15 ವರ್ಷಗಳಿಂದ ಶ್ರಮಿಸುತ್ತಿದ್ದಾರಂತೆ. ಇದು ವಿಶ್ವದ ಅತ್ಯಂತ ದುಬಾರಿ ದಿಂಬು ಎನ್ನಲಾಗಿದ್ದು, ಈ ದಿಂಬಿನ ಆರಂಭಿಕ ಬೆಲೆ 57 ಸಾವಿರ ಡಾಲರ್ (ಅಂದಾಜು 45 ಲಕ್ಷ ರೂ.) ಎಂದು ನಿಗದಿಪಡಿಸಲಾಗಿದೆ. ಅವರು ಈ ದಿಂಬಿನ ವಿಶೇಷ ಮತ್ತು ವಿವರಗಳನ್ನು tailormadepillow.com ನಲ್ಲಿ ಹಂಚಿಕೊಂಡಿದ್ದಾರೆ.

ಓದಿ:ಸಣ್ಣ ದಿಂಬಿನಿಂದ ಮೈಮುಚ್ಚಿಕೊಂಡ ನಟಿ... ಬೇಸಿಗೆಯಲ್ಲೂ ಬೆಂಕಿ ಅವತಾರ ಅಂತವ್ರೇ ಹೈಕ್ಳು!

ಉತ್ಪಾದನಾ ಪ್ರಕ್ರಿಯೆಯನ್ನು ವಿಡಿಯೋ ರೂಪದಲ್ಲಿ ಹಂಚಿಕೊಂಡಿರುವ ಥೀಜ್ ವ್ಯಾನ್ ಡೆರ್ ಹಿಲ್ಟ್ಸ್ ಈ ಅತ್ಯಾಧುನಿಕ ದಿಂಬನ್ನು ಈಜಿಪ್ಟಿನ ಹತ್ತಿ ಮತ್ತು ಮಲ್ಬೆರಿ ರೇಷ್ಮೆಯಿಂದ ತಯಾರಿಸಿದ್ದಾರಂತೆ. ಇದು ವಿಷಕಾರಿ ಅಲ್ಲದ ಫೋಮ್ನಿಂದ ತುಂಬಿರುತ್ತದೆ. ದಿಂಬಿನ ಮೇಲ್ಭಾಗವು 22.5 ಕ್ಯಾರೆಟ್ ನೀಲಮಣಿ ಮತ್ತು ನಾಲ್ಕು ವಜ್ರಗಳಿಂದ ಕೂಡಿದೆ. ಸುರಕ್ಷಿತ ಮತ್ತು ಆರೋಗ್ಯಕರ ನಿದ್ರೆಗಾಗಿ, ವಿದ್ಯುತ್ಕಾಂತೀಯ ವಿಕಿರಣವನ್ನು ತಡೆಗಟ್ಟಲು ದಿಂಬನ್ನು 24 ಕ್ಯಾರೆಟ್ ಚಿನ್ನದಲ್ಲಿ ಅಣಿಗೊಳಿಸಲಾಗಿದೆ.

ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಶಾಂತಿಯುತವಾಗಿ ಮಲಗಲು ದಿಂಬು ಸಹಾಯ ಮಾಡುತ್ತದೆ ಎಂದು ಡಿಸೈನರ್ ಹೇಳುತ್ತಾರೆ. ಹೈಟೆಕ್ ಪರಿಹಾರಗಳು ಮತ್ತು ವಿಂಟೇಜ್ ಕರಕುಶಲ ವಸ್ತುಗಳ ಸಂಯೋಜನೆಯ ಮೂಲಕ ಹೇಳಿ ಮಾಡಲಾದ ದಿಂಬು ಎಲ್ಲಕ್ಕಿಂತ ಹೆಚ್ಚು ನವೀನ ಮತ್ತು ವಿಶಿಷ್ಟವಾಗಿದೆ ಎಂದು ಅವರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details