ಇತ್ತೀಚಿನ ವರ್ಷಗಳಲ್ಲಿ ಜಗತ್ತಿನ ಅನೇಕ ದೇಶಗಳು ದೀರ್ಘಕಾಲೀನ ಸಾಂಕ್ರಾಮಿಕ ರೋಗ, ನೈಸರ್ಗಿಕ ವಿಪತ್ತು ಮತ್ತು ಯುದ್ಧ ಸಂಕಷ್ಟವನ್ನು ಅನುಭವಿಸಿವೆ. ಆದರೆ ವಿಶ್ವಸಂಸ್ಥೆ ಮತ್ತು ಪ್ರಪಂಚದಾದ್ಯಂತದ ಸರ್ಕಾರಗಳು ಜನರನ್ನು ಹೆಚ್ಚು ಸಂತೋಷಪಡಿಸಲು ಹಾಗೂ ಅವರ ಯೋಗಕ್ಷೇಮವನ್ನು ಸುಧಾರಿಸಲು ನೀತಿಗಳನ್ನು ರೂಪಿಸಲು ಶ್ರಮಿಸುತ್ತಿವೆ.
ಈ ನಿಟ್ಟಿನಲ್ಲಿ ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಾರ್ಷಿಕ 'ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್'ನಲ್ಲಿ ಫಿನ್ಲೆಂಡ್ ಅನ್ನು 'ವಿಶ್ವದ ಅತ್ಯಂತ ಸಂತೋಷದ ದೇಶ' ಎಂದು ಹೆಸರಿಸಲಾಗಿದೆ. ಸತತ 6ನೇ ವರ್ಷವೂ ಈ ದೇಶ ಮೊದಲ ಸ್ಥಾನದಲ್ಲಿದೆ. ವರದಿಯು ಒಟ್ಟು ದೇಶೀಯ ಉತ್ಪನ್ನ(GDP) ತಲಾದಾಯ, ಸಾಮಾಜಿಕ ಬೆಂಬಲ, ಆರೋಗ್ಯಕರ ಜೀವಿತಾವಧಿ, ಸ್ವಾತಂತ್ರ್ಯ, ಔದಾರ್ಯ ಮತ್ತು ಕಡಿಮೆ ಭ್ರಷ್ಟಾಚಾರವನ್ನು ಆಧರಿಸಿದೆ. ವರದಿಯನ್ನು ಮಾ.20ರಂದು ಬಿಡುಗಡೆ ಮಾಡಲಾಗಿದೆ. ಮಾ.20ರಂದು 'ಅಂತಾರಾಷ್ಟ್ರೀಯ ಸಂತೋಷದ ದಿನ' ಆಚರಿಸಲಾಗುತ್ತದೆ.
ವರ್ಲ್ಡ್ ಹ್ಯಾಪಿನೆಸ್ ರಿಪೋರ್ಟ್ ಯುಎನ್ ಸಸ್ಟೈನಬಲ್ ಡೆವಲಪ್‌ಮೆಂಟ್ ಸೊಲ್ಯೂಷನ್ಸ್ ನೆಟ್‌ವರ್ಕ್‌ನ ಪ್ರಕಟಣೆಯಾಗಿದೆ. ಇದು 150ಕ್ಕೂ ಹೆಚ್ಚು ದೇಶಗಳ ಜನರ ಜಾಗತಿಕ ಸಮೀಕ್ಷೆಯ ದತ್ತಾಂಶ ಆಧರಿಸಿದೆ ಎಂದು ಸಿಎನ್‌ಎನ್ ಹೇಳಿದೆ. ಈ ವರ್ಷದ ಪಟ್ಟಿಯು ಹಿಂದಿನ ಶ್ರೇಯಾಂಕಗಳನ್ನು ಹೋಲುತ್ತದೆ ಮತ್ತು ಅನೇಕ ನಾರ್ಡಿಕ್ ದೇಶಗಳು(ನಾರ್ವೆ, ಡೆನ್ಮಾರ್ಕ್, ಸ್ವೀಡನ್, ಫಿನ್ಲೆಂಡ್ ಮತ್ತು ಐಸ್ಲ್ಯಾಂಡ್ ಸೇರಿವೆ) ಉನ್ನತ ಸ್ಥಾನಗಳಲ್ಲಿವೆ. ಡೆನ್ಮಾರ್ಕ್ 2 ನೇ ಸ್ಥಾನದಲ್ಲಿದ್ದರೆ, ಐಸ್‌ಲ್ಯಾಂಡ್ 3 ನೇ ಸ್ಥಾನದಲ್ಲಿದೆ.
ಭಾರತದ ಶ್ರೇಯಾಂಕವೇನು?: ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾದ ಭಾರತ ದೇಶವು ನೇಪಾಳ, ಚೀನಾ, ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಶ್ರೀಲಂಕಾಕ್ಕಿಂತ ಕೆಳಗೆ ಅಂದರೆ 126ನೇ ಸ್ಥಾನದಲ್ಲಿದೆ. ಕುತೂಹಲಕಾರಿಯಾಗಿ, ರಷ್ಯಾ-ಉಕ್ರೇನ್ ಯುದ್ಧವು ಎರಡೂ ದೇಶಗಳ ಶ್ರೇಯಾಂಕದಲ್ಲಿ ಕುಸಿತಕ್ಕೆ ಕಾರಣವಾಗಿದೆ. ರಷ್ಯಾ 72ನೇ ಸ್ಥಾನದಲ್ಲಿದ್ದರೆ, ಉಕ್ರೇನ್ 92ನೇ ಸ್ಥಾನದಲ್ಲಿದೆ. ಅಫ್ಘಾನಿಸ್ತಾನಕ್ಕೆ ಕೊನೆಯ ಸ್ಥಾನ ಲಭಿಸಿದೆ. ಜಗತ್ತಿನ ಹಲವು ದೇಶಗಳಿಗೆ ನಾನಾ ರೀತಿಯಲ್ಲಿ ಶ್ರೇಯಾಂಕಗಳನ್ನು ನೀಡಲಾಗುತ್ತದೆ. ನಾನಾ ಸೂಚ್ಯಂಕಗಳನ್ನು ಆಧರಿಸಿ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಮೊದಲ ವಿಶ್ವ ಸಂತೋಷದ ವರದಿಯನ್ನು 2012ರಲ್ಲಿ ಪ್ರಕಟಿಸಲಾಗಿತ್ತು.
ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳಿವು..:ವಿಶ್ವ ಸಂತೋಷದ ವರದಿ ಶ್ರೇಯಾಂಕ ಹೆಚ್ಚಾಗಿ ಗ್ಯಾಲಪ್ ವರ್ಲ್ಡ್ ಪೋಲ್‌ನ ಜೀವನ ಮೌಲ್ಯಮಾಪನ ಆಧರಿಸಿದೆ. ಈ ಪಟ್ಟಿಯಲ್ಲಿ ಫಿನ್ಲೆಂಡ್ ಸತತ 6ನೇ ವರ್ಷವೂ ವಿಶ್ವದ ಅತ್ಯಂತ ಸಂತೋಷದಾಯಕ ದೇಶ ಎನಿಸಿಕೊಂಡಿದೆ. ಈ ವರದಿಯು ತನ್ನ ಸಂಶೋಧನೆಗಳನ್ನು ವಿವರಿಸಲು ಆರು ಮಾನದಂಡಗಳನ್ನು ಬಳಸುತ್ತದೆ. ಅವುಗಳು ಹೀಗಿವೆ..
1. ಆರೋಗ್ಯಕರ ಜೀವಿತಾವಧಿ
2. ತಲಾವಾರು ಜಿಡಿಪಿ
3. ಸಾಮಾಜಿಕ ಬೆಂಬಲ
4. ಕಡಿಮೆ ಭ್ರಷ್ಟಾಚಾರ
5. ಜನರು ಒಬ್ಬರನ್ನೊಬ್ಬರು ನೋಡುವ ಸಮುದಾಯದಲ್ಲಿ ಉದಾರತೆ
6. ಪ್ರಮುಖ ಜೀವನ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ವಾತಂತ್ರ್ಯ
ನಾರ್ಡಿಕ್ ರಾಷ್ಟ್ರ ಮತ್ತು ಅದರ ನೆರೆಯ ಡೆನ್ಮಾರ್ಕ್, ಐಸ್‌ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆ ಈ ಮಾನದಂಡಗಳಲ್ಲಿ ಅಗ್ರ ಸ್ಥಾನದಲ್ಲಿವೆ.
2023ರಲ್ಲಿ ವಿಶ್ವದ 20 ಸಂತೋಷದ ದೇಶಗಳು:
1. ಫಿನ್ಲೆಂಡ್
2. ಡೆನ್ಮಾರ್ಕ್
3. ಐಸ್‌ಲ್ಯಾಂಡ್
4. ಇಸ್ರೇಲ್