ಕರ್ನಾಟಕ

karnataka

ETV Bharat / international

ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು: ಹೊಸ ಆರ್ಥಿಕ ನೆರವು ನಿರಾಕರಿಸಿದ ವಿಶ್ವ ಬ್ಯಾಂಕ್

ಆರ್ಥಿಕ ಬಿಕ್ಕಟ್ಟಿನಿಂದ ನಲುಗಿರುವ ಶ್ರೀಲಂಕಾ ತನ್ನ ಕುಸಿತದ ಆರ್ಥಿಕತೆ ಸ್ಥಿರಗೊಳಿಸಲು ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳದ ಹೊರತು ಹೊಸ ಹಣಕಾಸು ನೆರವು ನೀಡುವುದಿಲ್ಲ ಎಂದು ವಿಶ್ವ ಬ್ಯಾಂಕ್ ಹೇಳಿದೆ.

Sri Lanka
ಶ್ರೀಲಂಕಾ ಆರ್ಥಿಕ ಬಿಕ್ಕಟ್ಟು

By

Published : Jul 30, 2022, 7:16 AM IST

ಕೊಲಂಬೊ (ಶ್ರೀಲಂಕಾ): ದಿವಾಳಿಯಾಗಿರುವ ದ್ವೀಪ ರಾಷ್ಟ್ರವು ತನ್ನ ಕುಸಿತದ ಆರ್ಥಿಕತೆಯನ್ನು ಸ್ಥಿರಗೊಳಿಸಲು ರಚನಾತ್ಮಕ ಸುಧಾರಣೆಗಳನ್ನು ಕೈಗೊಳ್ಳದ ಹೊರತು ಶ್ರೀಲಂಕಾಕ್ಕೆ ಹೊಸ ಹಣಕಾಸು ನೆರವು ನೀಡುವುದಿಲ್ಲ ಎಂದು ವಿಶ್ವ ಬ್ಯಾಂಕ್ ಶುಕ್ರವಾರ ಹೇಳಿದೆ.

ಶ್ರೀಲಂಕಾವು ಅಭೂತಪೂರ್ವ ಕುಸಿತವನ್ನು ಅನುಭವಿಸಿದೆ. ದೇಶದ 22 ಮಿಲಿಯನ್ ಜನರು ತಿಂಗಳುಗಟ್ಟಲೆ ಆಹಾರ ಮತ್ತು ಇಂಧನ ಕೊರತೆ, ರೋಲಿಂಗ್ ಬ್ಲ್ಯಾಕ್ಔಟ್ ಮತ್ತು ಅತಿರೇಕದ ಹಣದುಬ್ಬರ ಸಮಸ್ಯೆ ಎದುರಿಸಿದ್ದಾರೆ. ಅಲ್ಲದೇ ರಾಷ್ಟ್ರವು ಏಪ್ರಿಲ್‌ನಲ್ಲಿ ತನ್ನ $ 51-ಬಿಲಿಯನ್ ವಿದೇಶಿ ಸಾಲವನ್ನು ಮರುಪಾವತಿಸಲಿಲ್ಲ.

ಈ ತಿಂಗಳ ಆರಂಭದಲ್ಲಿ ನಡೆದ ಬೃಹತ್ ಪ್ರತಿಭಟನೆಗಳು ಆಗಿನ ಅಧ್ಯಕ್ಷ ಗೊಟಾಬಯ ರಾಜಪಕ್ಸೆ ಅವರನ್ನು ದೇಶದಿಂದ ಪಲಾಯನ ಮಾಡಲು ಮತ್ತು ರಾಜೀನಾಮೆ ನೀಡುವಂತೆ ಒತ್ತಾಯಿಸಿತು. ವಿಶ್ವಬ್ಯಾಂಕ್ ಶ್ರೀಲಂಕಾದ ಜನರ ಮೇಲೆ ಬಿಕ್ಕಟ್ಟಿನ ಪ್ರಭಾವದ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಆದರೆ, ಸರ್ಕಾರ ಅಗತ್ಯ ಸುಧಾರಣೆಗಳನ್ನು ಜಾರಿಗೆ ತರುವವವರೆಗೆ ಹಣವನ್ನು ನೀಡಲು ಸಿದ್ಧವಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

ತುರ್ತು ಅಗತ್ಯವಿರುವ ಔಷಧಗಳು, ಅಡುಗೆ ಅನಿಲ ಮತ್ತು ಶಾಲೆಯ ಊಟಕ್ಕೆ ಹಣಕಾಸು ಒದಗಿಸಲು ಈಗಾಗಲೇ $160 ಮಿಲಿಯನ್ ನೀಡಲಾಗಿದೆ. ಶುಕ್ರವಾರ ಬಿಡುಗಡೆಯಾದ ಕೊಲಂಬೊ ಗ್ರಾಹಕ ಬೆಲೆ ಸೂಚ್ಯಂಕ (CCPI) ಯ ಅಂಕಿಅಂಶಗಳ ಪ್ರಕಾರ, ಹಣದುಬ್ಬರ 10ನೇ ಸತತ ಮಾಸಿಕ ದಾಖಲೆಗಾಗಿ ಜುಲೈನಲ್ಲಿ ಶೇ. 60.8ಕ್ಕೆ ಏರಿದೆ. ಅಂದರೆ ಶ್ರೀಲಂಕಾದ ರೂಪಾಯಿಯು ಈ ವರ್ಷ ಯುಸ್​​ ಡಾಲರ್‌ಗೆ ಹೋಲಿಸಿದರೆ ಅರ್ಧಕ್ಕಿಂತ ಹೆಚ್ಚು ಮೌಲ್ಯವನ್ನು ಕಳೆದುಕೊಂಡಿದೆ.

ಯುಎನ್​​ ವರ್ಲ್ಡ್ ಫುಡ್ ಪ್ರೋಗ್ರಾಂ ಅಂದಾಜಿನ ಪ್ರಕಾರ, ಪ್ರತಿ ಆರು ಶ್ರೀಲಂಕಾದ ಕುಟುಂಬಗಳಲ್ಲಿ ಐದು ಕುಟುಂಬಗಳು ಕಡಿಮೆ - ಗುಣಮಟ್ಟದ ಆಹಾರವನ್ನು ಖರೀದಿಸಲು, ಕಡಿಮೆ ತಿನ್ನಲು ಅಥವಾ ಕೆಲವು ಸಂದರ್ಭಗಳಲ್ಲಿ ಸಂಪೂರ್ಣವಾಗಿ ಊಟವನ್ನು ತ್ಯಜಿಸಲು ಒತ್ತಾಯಿಸಲಾಗಿದೆ.

ಜು.9 ರಂದು ಪ್ರತಿಭಟನಾಕಾರರು ರಾಜಪಕ್ಸೆ ಅವರ ನಿವಾಸಕ್ಕೆ ಮುತ್ತಿಗೆ ಹಾಕಿದಾಗ ಅವರು ಸಿಂಗಾಪುರಕ್ಕೆ ಪಲಾಯನಗೊಂಡಿದ್ದರು. ಬಳಿಕ ರಾಜೀನಾಮೆ ನೀಡಿದ್ದರು. ಅವರ ಉತ್ತರಾಧಿಕಾರಿಯಾಗಿ ರಾನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡಿದ್ದು, ಸದ್ಯ ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾದ ಅಧ್ಯಕ್ಷ, ಪ್ರಧಾನಿ ನಿವಾಸದಲ್ಲಿ ಕಳ್ಳತನ: ಪುರಾತನ 1 ಸಾವಿರ ಕಲಾಕೃತಿ ನಾಪತ್ತೆ

ABOUT THE AUTHOR

...view details