ಕರ್ನಾಟಕ

karnataka

ETV Bharat / international

ಬಾಯ್​​ಫ್ರೆಂಡ್​​ ಮದುವೆಯಾಗಲು ದೈಹಿಕ ಸಂಪರ್ಕದ ವೇಳೆ ಕಾಂಡೋಮ್​ಗೆ ರಂಧ್ರ ಮಾಡಿದ ಯುವತಿ - ಜರ್ಮನಿಯಲ್ಲಿ ವಿಚಿತ್ರ ಪ್ರಕರಣ

ಜರ್ಮನಿಯಲ್ಲೊಂದು ವಿಚಿತ್ರ ಪ್ರಕರಣ ನಡೆದಿದೆ. ಬಾಯ್​​ಫ್ರೆಂಡ್‌ನ ಮದುವೆಯಾಗುವ ಉದ್ದೇಶದಿಂದ ಆತನೊಂದಿಗೆ ದೈಹಿಕ ಸಂಪರ್ಕ ನಡೆಸುತ್ತಿದ್ದ ವೇಳೆ ಕಾಂಡೋಮ್​ಗೆ ರಂಧ್ರ ಕೊರೆದು, ಯುವತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

holes in her partner condoms
holes in her partner condoms

By

Published : May 6, 2022, 2:19 PM IST

ಜರ್ಮನಿ:ಬಾಯ್‌​ಫ್ರೆಂಡ್​ ಜೊತೆ ದೈಹಿಕ ಸಂಪರ್ಕ ನಡೆಸುತ್ತಿದ್ದ ವೇಳೆ ಆತನಿಗೆ ಗೊತ್ತಾಗದ ರೀತಿಯಲ್ಲಿ ಕಾಂಡೋಮ್​ಗೆ ರಂಧ್ರ ಮಾಡಿ, ಯುವತಿಯೋರ್ವಳು ಸಂಕಷ್ಟಕ್ಕೆ ಸಿಲುಕಿದ್ದಾಳೆ. ಪಶ್ಚಿಮ ಜರ್ಮನಿಯಲ್ಲಿ ಘಟನೆ ನಡೆದಿದೆ. ಈ ಕಾರಣದಿಂದಾಗಿ ಆಕೆ ಜೈಲು ಸೇರಿದ್ದಾಳೆ.

ಆನ್​ಲೈನ್​​ ಮೂಲಕ ಪರಿಚಯವಾದ 39 ವರ್ಷದ ಯುವತಿ 42 ವರ್ಷದ ಪುರುಷನೊಂದಿಗೆ ವಾಸವಾಗಿದ್ದು, ಇಬ್ಬರ ನಡುವೆ ಪ್ರೀತಿ ಚಿಗುರಿದೆ. ಈ ವೇಳೆ ದೈಹಿಕ ಸಂಪರ್ಕವೂ ನಡೆದಿದೆ. ಆತನನ್ನು ವಿಪರೀತ ಹಚ್ಚಿಕೊಂಡ ಯುವತಿ ಮದುವೆ ಮಾಡಿಕೊಳ್ಳುವಂತೆ ತಿಳಿಸಿದ್ದಾಳೆ. ಆದರೆ, ಇದಕ್ಕೆ ಆತ ಒಪ್ಪಲಿಲ್ಲ.

ಕಾಂಡೋಮ್​ಗೆ ರಂಧ್ರ: ತಾನು ಗರ್ಭಿಣಿಯಾದರೆ ಆತ ತನ್ನೊಂದಿಗೆ ಮದುವೆಯಾಗುತ್ತಾನೆಂದು ಯೋಚಿಸಿದ್ದಾಳೆ. ದೈಹಿಕ ಸಂಬಂಧದ ಗೊತ್ತಾಗದ ರೀತಿಯಲ್ಲಿ ಕಾಂಡೋಮ್​ಗೆ ರಂಧ್ರ ಮಾಡಿದ್ದಾಳೆ. ಇದಾದ ಬಳಿಕ ಮೆಸೇಜ್ ಮಾಡಿದ್ದು, ನಾನು ಗರ್ಭಿಣಿಯಾಗಿದ್ದೇನೆಂದು ಅನಿಸುತ್ತದೆ ಎಂದು ಹೇಳಿದ್ದಾಳೆ. ಜೊತೆಗೆ ಕೃತ್ಯವನ್ನೂ ಒಪ್ಪಿಕೊಂಡಿದ್ದಾಳೆ. ಇದರ ಬೆನ್ನಲ್ಲೇ ಆತ ಕ್ರಿಮಿನಲ್ ದೂರು ದಾಖಲು ಮಾಡಿದ್ದಾನೆ.

ಇದನ್ನೂ ಓದಿ:ಮಕ್ಕಳಿಗೆ ವಿಷವುಣಿಸಿ, ಆತ್ಮಹತ್ಯೆಗೆ ಶರಣಾದ ದಂಪತಿ; ಲಾಡ್ಜ್​ನಲ್ಲಿ ನಾಲ್ವರ ಶವ ಪತ್ತೆ

ಕೋರ್ಟ್ ಮೊರೆ ಹೋದ ವ್ಯಕ್ತಿ:ದೈಹಿಕ ಸಂಬಂಧದ ವೇಳೆ ತನಗೆ ಗೊತ್ತಿಲ್ಲದ ರೀತಿಯಲ್ಲಿ ಕಾಂಡೋಮ್​ಗೆ ರಂಧ್ರ ಮಾಡಿದ್ದು, ಇದೊಂದು ಕ್ರಿಮಿನಲ್​ ಕೇಸ್​ ಆಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದಾನೆ. ಪಾಲುದಾರನಿಗೆ ಅರಿವಿಲ್ಲದ ರೀತಿಯಲ್ಲಿ ಉದ್ದೇಶಪೂರ್ವಕವಾಗಿ ಕಾಂಡೋಮ್​ಗೆ ರಂಧ್ರ ಮಾಡಿದ್ದಕ್ಕಾಗಿ ಆಕೆಗೆ ಆರು ತಿಂಗಳ ಜೈಲು ಸಜೆ ವಿಧಿಸಲಾಗಿದೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ABOUT THE AUTHOR

...view details