ಕೊಲಂಬೊ(ಶ್ರೀಲಂಕಾ): ಇಂಧನ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿರುವ ನೆರೆಯ ದ್ವೀಪ ದೇಶ ಶ್ರೀಲಂಕಾ ಮತ್ತೊಮ್ಮೆ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಶಿಕ್ಷಣ ಸಚಿವಾಲಯವು ಇಂದಿನಿಂದ ಎಲ್ಲಾ ಸರ್ಕಾರಿ ಮತ್ತು ರಾಜ್ಯ-ಅನುಮೋದಿತ ಖಾಸಗಿ ಶಾಲೆಗಳಿಗೆ ವಾರದ ರಜೆ ಘೋಷಿಸಿದೆ.
ಕೊಲಂಬೊ ನಗರದೊಳಗಿನ ಎಲ್ಲಾ ಸರ್ಕಾರಿ ಮತ್ತು ಸರ್ಕಾರಿ-ಅನುಮೋದಿತ ಖಾಸಗಿ ಶಾಲೆಗಳು ಹಾಗು ಇತರ ಪ್ರಾಂತ್ಯಗಳಲ್ಲಿನ ಪ್ರಮುಖ ನಗರಗಳ ಶಾಲೆಗಳು ಮುಂದಿನ ವಾರದವರೆಗೆ ಮುಚ್ಚಲ್ಪಡುತ್ತವೆ ಎಂದು ಶಿಕ್ಷಣ ಸಚಿವಾಲಯ ಆದೇಶಿಸಿದೆ. ಈ ಬಗ್ಗೆ ಮಾಹಿತಿ ನೀಡಿದ ಶಿಕ್ಷಣ ಸಚಿವಾಲಯದ ಕಾರ್ಯದರ್ಶಿ ನಿಹಾಲ್ ರಣಸಿಂಗ್, ಮಕ್ಕಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸಲು ಶಾಲೆಗಳಿಗೆ ಸೂಚಿಸಲಾಗಿದೆ. ಸಾರಿಗೆ ಸಮಸ್ಯೆ ಇಲ್ಲದೆಡೆಗಳಲ್ಲಿ ತರಗತಿಗಳನ್ನು ನಡೆಸಲು ಅನುಮತಿಸಲಾಗಿದೆ ಎಂದು ತಿಳಿಸಿದರು.