ಕರ್ನಾಟಕ

karnataka

ETV Bharat / international

ನಾವು ಯಾರನ್ನೂ ಜೈಲಿಗೆ ಹಾಕುವುದಿಲ್ಲ: ಇಮ್ರಾನ್​ ಖಾನ್​ಗೆ ಪ್ರಧಾನಿ ಆಕಾಂಕ್ಷಿ ಶೆಹಬಾಜ್ ಸಂದೇಶ

ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್​ ಖಾನ್​ ಪ್ರಧಾನಿ ಹುದ್ದೆ ಕಳೆದುಕೊಂಡ ಬಳಿಕ ಶೆಹಬಾಜ್ ಷರೀಫ್ ಟ್ವೀಟ್​ ಮಾಡಿ, ತಮ್ಮ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜಕೀಯ ವಿರೋಧಿಗಳ ವಿರುದ್ಧ ಯಾವುದೇ ಪ್ರತೀಕಾರದ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆಯನ್ನು ನೀಡಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಆಕಾಂಕ್ಷಿ ಶೆಹಬಾಜ್ ಷರೀಫ್
ಪಾಕಿಸ್ತಾನದ ಪ್ರಧಾನಿ ಆಕಾಂಕ್ಷಿ ಶೆಹಬಾಜ್ ಷರೀಫ್

By

Published : Apr 10, 2022, 7:39 PM IST

ಇಸ್ಲಾಮಾಬಾದ್ (ಪಾಕಿಸ್ತಾನ): ನೆರೆ ರಾಷ್ಟ್ರ ಪಾಕಿಸ್ತಾನದ ಪ್ರಧಾನಿ ಹುದ್ದೆಯಿಂದ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಪಕ್ಷದ ನಾಯಕ, ಮಾಜಿ ಕ್ರಿಕೆಟಿಗ ಇಮ್ರಾನ್​ ಖಾನ್​ ಪದಚ್ಯುತಿಗೊಂಡ ಬೆನ್ನಲ್ಲೇ ಹೊಸ ಸರ್ಕಾರ ಅಧಿಕಾರಕ್ಕೆ ಬರುವ ಚಟುವಟಿಕೆಗಳು ಆರಂಭವಾಗಿವೆ. ವಿರೋಧ ಪಕ್ಷದ ನಾಯಕರಾದ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಪಕ್ಷದ ಮುಖ್ಯಸ್ಥ ಶೆಹಬಾಜ್ ಷರೀಫ್ ಮುಂದಿನ ಪ್ರಧಾನಿ ಹುದ್ದೆಗೇರಲು ಸಿದ್ಧತೆ ನಡೆಸುತ್ತಿದ್ದಾರೆ. ಇದಕ್ಕೂ ಮುನ್ನವೇ ಇಮ್ರಾನ್​ ಖಾನ್​ಗೆ ಸಂದೇಶವೊಂದನ್ನು ಅವರು ರವಾನಿಸಿದ್ದಾರೆ.

ಅವಿಶ್ವಾಸ ನಿರ್ಣಯದಲ್ಲಿ ಇಮ್ರಾನ್​ ಖಾನ್​ ಪ್ರಧಾನಿ ಹುದ್ದೆ ಕಳೆದುಕೊಂಡ ಬಳಿಕ ಶೆಹಬಾಜ್ ಷರೀಫ್ ಟ್ವೀಟ್​ ಮಾಡಿ, 'ಕಳೆದ ರಾತ್ರಿ ರಾಷ್ಟ್ರ ಮತ್ತು ಸಂಸತ್ತಿನ ಭವನವನ್ನು ಗಂಭೀರ ಬಿಕ್ಕಟ್ಟಿನಿಂದ ಮುಕ್ತಗೊಳಿಸಲಾಗಿದೆ. ಪಾಕಿಸ್ತಾನಕ್ಕೆ ಹೊಸ ಉದಯದ ಅಭಿನಂದನೆಗಳು' ಎಂದು ಹೇಳಿದ್ದಾರೆ.

ಅಲ್ಲದೇ, 'ನಾವು ಯಾರ ಮೇಲೂ ಸೇಡು ತೀರಿಸಿಕೊಳ್ಳುವುದಿಲ್ಲ. ನಾವು ಯಾರಿಗೂ ಅನ್ಯಾಯ ಮಾಡುವುದಿಲ್ಲ ಮತ್ತು ನಾವು ಯಾರನ್ನೂ ಜೈಲಿಗೆ ಹಾಕುವುದಿಲ್ಲ. ಕಾನೂನು ತನ್ನದೇ ಆದ ಮಾರ್ಗದಲ್ಲಿ ಎಲ್ಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ' ಎಂದು ಶೆಹಬಾಜ್ ಟ್ವೀಟ್​ ಮಾಡಿದ್ದಾರೆ. ಈ ಮೂಲಕ ಹೊಸ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜಕೀಯ ವಿರೋಧಿಗಳ ವಿರುದ್ಧ ಯಾವುದೇ ಪ್ರತೀಕಾರ, ಸೇಡಿನ ಕ್ರಮಗಳನ್ನು ತೆಗೆದುಕೊಳ್ಳುವುದಿಲ್ಲ ಎಂಬ ಭರವಸೆಯ ಸಂದೇಶವನ್ನು ನೀಡಿದ್ದಾರೆ.

ಇದನ್ನೂ ಓದಿ:ಪಾಕ್‌ ರಾಜಕೀಯ ಇನ್ನಿಂಗ್ಸ್‌ನಲ್ಲಿ ಇಮ್ರಾನ್‌ ಖಾನ್‌ ರನೌಟ್‌!: ಸ್ವಾತಂತ್ರ್ಯ ಹೋರಾಟದ ಕಹಳೆ ​

ABOUT THE AUTHOR

...view details