ಮ್ಯಾಡ್ರಿಡ್(ಸ್ಪೇನ್):ವೇಲೆನ್ಸಿಯಾ ಪ್ರದೇಶದಲ್ಲಿ ಭೀಕರ ಕಾಡ್ಗಿಚ್ಚು ಉಂಟಾಗಿದ್ದು, ದೊಡ್ಡ ಪ್ರಮಾಣದ ಅರಣ್ಯ ಸಂಪತ್ತು ಸುಟ್ಟು ಹೋಗಿದೆ ಭಸ್ಮವಾಗಿದೆ. ಕಳೆದ ಬುಧವಾರ ಪೂರ್ವ ವೇಲೆನ್ಸಿಯಾ ಪ್ರದೇಶಕ್ಕೆ ವ್ಯಾಪಿಸಿದ್ದ ಕಾಡ್ಗಿಚ್ಚು ವೇಗವಾಗಿ ಬೀಸುತ್ತಿರುವ ಗಾಳಿಯಿಂದಾಗಿ ಇದೀಗ ಉತ್ತರ ವೇಲೆನ್ಸಿಯಾದ ಬೆಜಿಸ್ ಪುರಸಭೆ ಮಾರ್ಗವಾಗಿ ವ್ಯಾಪಿಸುತ್ತಿದೆ. ಸ್ಪ್ಯಾನಿಷ್ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಬೆಜಿಸ್ ಪುರಸಭೆ ವ್ಯಾಪ್ತಿಯಲ್ಲಿ ಬೆಂಕಿಯ ಜ್ವಾಲೆಯಿಂದ ಮೂವರು ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದಾರೆ. ಈಗಾಗಲೇ ಈ ಪ್ರದೇಶದ ಹಲವಾರು ಗ್ರಾಮಗಳನ್ನು ಸ್ಥಳಾಂತರಿಸಲಾಗಿದೆ. ಬಲವಾದ ಗಾಳಿ ಮತ್ತು ಶುಷ್ಕ ಹವಾಮಾನದಿಂದಾಗಿ ಬೆಂಕಿ ಬಹುಬೇಗ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ ಎಂದು ಸ್ಥಳೀಯ ತುರ್ತು ಸೇವೆಗಳು ಟ್ವಿಟರ್‌ನಲ್ಲಿ ತಿಳಿಸಿವೆ.
ಇದನ್ನೂ ಓದಿ:ಕಾಡ್ಗಿಚ್ಚಿಗೆ ಧಗಧಗಿಸುತ್ತಿದೆ ಪೋರ್ಚುಗಲ್ ಅರಣ್ಯ; ವಿಮಾನ ಅಪಘಾತದಲ್ಲಿ ಪೈಲಟ್ ಸಾವು