ಪ್ಯಾರಿಸ್:ದಕ್ಷಿಣ ಪೋರ್ಚುಗಲ್‌ನಲ್ಲಿ ಕಾಡ್ಗಿಚ್ಚು ಹೊತ್ತಿಕೊಂಡಿದೆ. ಬಲವಾದ ಗಾಳಿ ಮತ್ತು ಶುಷ್ಕ ಹವಾಮಾನದಿಂದಾಗಿ ಬೆಂಕಿ ಬಹುಬೇಗ ವ್ಯಾಪಕವಾಗಿ ಹರಡಿಕೊಳ್ಳುತ್ತಿದೆ. ಬೋರ್ಡೆಕ್ಸ್ ಪ್ರದೇಶದ ಪೈನ್ ಕಾಡು ಸತತ ಒಂದು ವಾರದಿಂದ ಅಗ್ನಿ ಜ್ವಾಲೆಯಲ್ಲಿ ಬೇಯುತ್ತಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡುತ್ತಿದ್ದಾರೆ.
ವಿಮಾನಗಳ ಮೂಲಕವೂ ನೀರು ಸುರಿದು ಕಾಡ್ಗಿಚ್ಚು ನಂದಿಸಲು ಪ್ರಯತ್ನಿಸುವ ಮಧ್ಯೆ ವಿಮಾನ ಅಪಘಾತಕ್ಕೀಡಾಗಿ ಓರ್ವ ಪೈಲಟ್ ಸಾವನ್ನಪ್ಪಿದ ಘಟನೆಯೂ ನಡೆದಿದೆ. ಇದು ಈ ವರ್ಷ ಪೋರ್ಚುಗಲ್‌ನಲ್ಲಿ ಸಂಭವಿಸಿದ ಮೊದಲ ಅಗ್ನಿ ಅವಘಡವಾಗಿದೆ. ಕಾಡ್ಗಿಚ್ಚಿಗೆ 160 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾವಿರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತಿದೆ.
ಸತತ ಒಂದು ವಾರದಿಂದ ಹೊತ್ತಿ ಉರಿಯುತ್ತಿರುವ ಕಾಡಿನ ಬೆಂಕಿ ಜನವಸತಿ ಪ್ರದೇಶಗಳನ್ನೂ ಆವರಿಸಿಕೊಳ್ಳುತ್ತಿದೆ. ಇದರಿಂದ ಹತ್ತಾರು ಹಳ್ಳಿಗಳ 11,000 ಜನರನ್ನು ಇಲ್ಲಿಂದ ಸ್ಥಳಾಂತರಗೊಳ್ಳುವಂತೆ ಸೂಚಿಸಲಾಗಿದೆ. ಪೈನ್ ಮರಗಳು ಜ್ವಾಲೆಯಲ್ಲಿ ಬೇಯುತ್ತಿರುವುದು ಮತ್ತು ದಟ್ಟ ಹೊಗೆ ಹಬ್ಬಿಕೊಂಡಿರುವ ಭೀಕರ ದೃಶ್ಯಗಳನ್ನು ಅಗ್ನಿಶಾಮಕ ದಳ ಹಂಚಿಕೊಂಡಿದೆ.