ಕರ್ನಾಟಕ

karnataka

ETV Bharat / international

ಅಮೆರಿಕಕ್ಕೆ ಅಮೆರಿಕವೇ ವಿಷಯವೊಂದರ ಉದ್ವಿಗ್ನತೆಯಲ್ಲಿದೆ.. ಆದರೆ ಎಲ್ಲಿ ಹೋದರೋ ಎಲಾನ್​ ಮಸ್ಕ್​..! - ಆದರೆ ಎಲ್ಲಿ ಹೋದರೋ ಎಲಾನ್​ ಮಸ್ಕ್

ಅಮೆರಿಕಕ್ಕೆ ಅಮೆರಿಕವೇ ಈ ವಿಷಯಗಳ ಮೇಲೆ ನಿಗಿ ನಿಗಿ ಕೆಂಡವಾಗಿದೆ. ಆದರೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ಈ ವಿಷಯದಲ್ಲಿ ಭಾರಿ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯವೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

Where is Elon Musk as America faces biggest issues of its times
ಅಮೆರಿಕಕ್ಕೆ ಅಮೆರಿಕವೇ ವಿಷಯವೊಂದರ ಉದ್ವಿಗ್ನತೆಯಲ್ಲಿದೆ.. ಆದರೆ ಎಲ್ಲಿ ಹೋದರೋ ಎಲಾನ್​ ಮಸ್ಕ್​..!

By

Published : Jun 28, 2022, 7:00 AM IST

ನ್ಯೂಯಾರ್ಕ್​:ಅಮೆರಿಕ ಸುಪ್ರೀಂಕೋರ್ಟ್‌ ಗರ್ಭಪಾತದ ಹಕ್ಕನ್ನು ವಾಪಸ್ ಪಡೆದಿದೆ. ಅಮೆರಿಕ ಅತ್ಯುನ್ನತ ಕೋರ್ಟ್​ ನಿರ್ಧಾರಕ್ಕೆ ವ್ಯಾಪಕ ಪರ ವಿರೋಧ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ದಿನೇ ದಿನೇ ಹೆಚ್ಚಾಗುತ್ತಿರುವ ಗುಂಡಿನ ದಾಳಿ ಬಗ್ಗೆ ಅಮೆರಿಕ ಸರ್ಕಾರವೇ ಚಿಂತಿತವಾಗಿದೆ. ಈ ಸಂಬಂಧ ಬಂದೂಕು ಬಳಕೆ ನಿಯಂತ್ರಣದ ಕಾನೂನು ಮಾಡಲು ಅಮೆರಿಕ ನಿರ್ಧರಿಸಿದೆ.

ಹೀಗೆ ಅಮೆರಿಕಕ್ಕೆ ಅಮೆರಿಕವೇ ಈ ವಿಷಯಗಳ ಮೇಲೆ ನಿಗಿ ನಿಗಿ ಕೆಂಡವಾಗಿದೆ. ಆದರೆ ಎಲ್ಲ ವಿಷಯಗಳ ಬಗ್ಗೆ ಮಾತನಾಡುವ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಎಲಾನ್​ ಮಸ್ಕ್​ ಈ ವಿಷಯದಲ್ಲಿ ಭಾರಿ ಮೌನಕ್ಕೆ ಶರಣಾಗಿದ್ದಾರೆ. ಈ ಬಗ್ಗೆ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ವಿಷಯವೇ ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಟೆಸ್ಲಾ ಸಿಇಒ ಎಲಾನ್​​ ಮಸ್ಕ್ ಟ್ವಿಟರ್​ ಜತೆ 44 ಬಿಲಿಯನ್ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿದ್ದು ನಿಮಗೆಲ್ಲ ಗೊತ್ತೇ ಇದೆ. ಜೂನ್ 21 ರಂದು ಕೊನೆಯ ಟ್ವೀಟ್ ಮಾಡಿದ ಅವರು ಆ ಬಳಿಕ ಟ್ವೀಟ್​ ಗೊಡವೆಗೇ ಹೋಗಿಲ್ಲ ಎಂದು ಅಲ್ಲಿನ ಮಾಧ್ಯಮವೊಂದು ವರದಿ ಮಾಡಿದೆ.

ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಯಾದ ಮಸ್ಕ್, SpaceX, Neuralink ಮತ್ತು The Boring Co ನಂತಹ ತನ್ನ ಉದ್ಯಮಗಳ ಕುರಿತಾದ ವಿಷಯಗಳ ಬಗ್ಗೆ ಆಗಾಗ್ಗೆ ಟ್ವೀಟ್​ ಮಾಡುವ ಇಲ್ಲವೇ ಪ್ರತಿಕ್ರಿಯೆ ನೀಡುವ ಮೂಲಕ ಸದ್ದು ಮಾಡುತ್ತಿರುತ್ತಾರೆ. ರಾಜಕೀಯ, ಪಾಪ್ ಸಂಸ್ಕೃತಿ ಮತ್ತು ಪ್ರಪಂಚದ ಘಟನೆಗಳ ಬಗ್ಗೆ ಕಮೆಂಟ್​ ಮಾಡಿ ಗಮನ ಸೆಳೆಯುತ್ತಾರೆ.

ಆದರೆ, ಅಮೆರಿಕದಲ್ಲಿನ ಈ ಎರಡು ಪ್ರಮುಖ ಬೆಳವಣಿಗೆಗಳ ಬಗ್ಗೆ ಮಾತ್ರ ಎಲಾನ್​ ಮಸ್ಕ್​ ಮೌನಕ್ಕೆ ಶರಣಾಗಿದ್ದಾರೆ. ಇದು ಎಲ್ಲ ಜಾಲತಾಣಿಗರ ಕೆಂಗಣ್ಣಿಗೆ ಗುರಿಯಾಗಿದೆ. ಎಲ್ಲದರ ಬಗ್ಗೆ ಮಾತನಾಡುವ ನೀವು ಅಮೆರಿಕದ ಜ್ವಲಂತ ಸಮಸ್ಯೆಗಳ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಜನರು ಪ್ರಶ್ನಿಸಿದ್ದಾರೆ.

ಜೂನ್ 21 ರ ಮೊದಲು, ಮಸ್ಕ್ ಚೀಸ್ ಬಗ್ಗೆ ಕಮೆಂಟ್​ ಮಾಡಿದ್ದರು. ಡೊಗೆಕಾಯಿನ್ ಅನ್ನು ಬೆಂಬಲಿಸಿ ಮಾತನಾಡಿದ್ದರು, SpaceX ಮತ್ತು Twitter ನ ವೀಕ್ಷಣೆಗಳನ್ನು ಪೋಸ್ಟ್ ಮಾಡಿದ್ದರು.

ಇದಕ್ಕೂ ಮೊದಲು, ಅವರು ಜಪಾನ್, ಇಟಲಿ, ದಕ್ಷಿಣ ಕೊರಿಯಾ, ಹಾಂಕಾಂಗ್, ಚೀನಾ ಮತ್ತು ಅಮೆರಿಕದಲ್ಲಿ ಜನಸಂಖ್ಯೆಯ ಕುಸಿತದ ಬಗ್ಗೆ ಟ್ವೀಟ್ ಮಾಡಿ ಗಮನ ಸೆಳೆದಿದ್ದರು. ಆದರೆ ಕೆಲ ದಿನಗಳಿಂದ ದಿಢೀರ್​ ಮೌನಕ್ಕೆ ಶರಣಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಇದನ್ನು ಓದಿ:ಶರ್ಟ್​ಲೆಸ್ ಪುಟಿನ್.. 'ನಾವೂ ಸ್ಟ್ರಾಂಗ್' ಎಂದ ಕೆನಡಾ ಪ್ರಧಾನಿ

ABOUT THE AUTHOR

...view details