ಮಾಸ್ಕೋ (ರಷ್ಯಾ): ಉಕ್ರೇನ್ ಮತ್ತು ರಷ್ಯಾ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಮಧ್ಯೆಯೇ ಉಕ್ರೇನ್ನಲ್ಲಿ ತನ್ನ ಸೇನೆ ಕಾರ್ಯಾಚರಣೆಗಳಿಗೆ ರಷ್ಯಾ ಹೊಸ ಕಮಾಂಡರ್ ಆಗಿ ಜನರಲ್ ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ನೇಮಿಸಿದೆ. ಸಿರಿಯಾದಲ್ಲಿ ನಡೆದ ರಷ್ಯಾದ ಕಾರ್ಯಾಚರಣೆಯ ಪರಿಣತಿಯನ್ನು ಹೊಸ ಕಮಾಂಡರ್ ಹೊಂದಿದ್ದಾರೆ.
ಉಕ್ರೇನ್ನಲ್ಲಿ ಹಿಡಿತ ಸಾಧಿಸುವ ನಿರೀಕ್ಷೆ: ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ಕೇವಲ ಕಮಾಂಡರ್ ಆಗಿ ರಷ್ಯಾದ ಅಧ್ಯಕ್ಷ ಪುಟಿನ್ ಕಚೇರಿ ನೋಡುತ್ತಿಲ್ಲ. ಬದಲಿಗೆ ಜನರಲ್ ಅಲೆಕ್ಸಾಂಡರ್ ನಾಯಕತ್ವದಲ್ಲಿ ಉಕ್ರೇನ್ನಲ್ಲಿ ಒಟ್ಟಾರೆ ತನ್ನ ಹಿಡಿತ ಸಾಧಿಸುವ ನಿರೀಕ್ಷೆ ಹೊಂದಿದೆ. ಮೇ 9ರೊಳಗೆ ಪೂರ್ವ ಉಕ್ರೇನ್ನಲ್ಲಿ ಊಹೆಗೂ ಮೀರಿದ ಯಶಸ್ಸನ್ನು ರಷ್ಯಾ ನಿರೀಕ್ಷಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಪರಿಚಯ: ಹೊಸ ಕಮಾಂಡರ್ ಅಲೆಕ್ಸಾಂಡರ್ ಡ್ವೊರ್ನಿಕೋವ್ ಮೇಲೆ ರಷ್ಯಾದ ಇಂತಹ ನಿರೀಕ್ಷೆಗೆ ಕಾರಣವೂ ಇವೆ. ಅದು ಇವರು ತಮ್ಮ ಸೇವಾವಧಿಯಲ್ಲಿ ತೋರಿರುವ ಅನೇಕ ರೀತಿಯ ಸಾಮರ್ಥ್ಯ. 1982ರಲ್ಲಿ ರಷ್ಯಾ ಸೇನೆಗೆ ಕಮಾಂಡರ್ ಆಗಿ ಸೇರಿದ್ದ ಅಲೆಕ್ಸಾಂಡರ್ ಡ್ವೊರ್ನಿಕೋವ್ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ.