ಹಮಾಸ್- ಇಸ್ರೇಲ್ ನಡುವಿನ ಸಂಘರ್ಷ ಒಂದು ಕಡೆಯಾದರೆ, ಮತ್ತೊಂದು ಕಡೆ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಮುಂದುವರೆದಿದೆ. ಇದರ ನಡುವೆ ಮತ್ತೊಂದು ಯುದ್ಧಕ್ಕೆ ಜಗತ್ತು ಸಾಕ್ಷಿಯಾಗಿದೆ. ಅದುವೇ ಕೆಂಪು ಸಮುದ್ರದ ಮೇಲೆ ಯೆಮೆನ್ನ ಹೌತಿ ಉಗ್ರರ ದಾಳಿ. ಈ ದಾಳಿಯಿಂದಾಗಿ ಮತ್ತೊಂದು ದೀರ್ಘ ಸಮಸ್ಯೆಯನ್ನು ಜಗತ್ತು ಎದುರಿಸುವಂತಾಗಿದೆ.
ಕೆಂಪು ಸಮುದ್ರದ ಮಾರ್ಗ: ಯುರೋಪ್ ಮತ್ತು ಏಷ್ಯಾದ ನಡುವೆ ವಾಣಿಜ್ಯ ಸರಕು ಸಾಗಣೆಯ ಪ್ರಮುಖ ಸಮುದ್ರ ಮಾರ್ಗ ಈ ಕೆಂಪು ಸಮುದ್ರವಾಗಿದೆ. ಈ ಮಾರ್ಗದ ಬಾಬ್ ಎಲ್ ಮಂಡೇಬ್ ಸಮೀಪದಲ್ಲೇ ಯಮೆನ್ ದೇಶವಿದ್ದು, ಇದು ಅಡೆನ್ ಕೊಲ್ಲಿಯ ಮೂಲಕ ಕೆಂಪು ಸಮುದ್ರವನ್ನು ಸಂಪರ್ಕಿಸುತ್ತದೆ. ಪಶ್ಚಿಮ ದೇಶಗಳಿಂದ ಪೂರ್ವಕ್ಕೆ ಬಂದ ಹಡಗುಗಳು ಸೂಯೆಜ್ ಕಾಲುವೆ ಮೂಲದ ಕೆಂಪು ಸಮುದ್ರ ಮಾರ್ಗವಾಗಿ ಚಲಿಸುತ್ತದೆ. ಯುರೋಪ್ ಮತ್ತು ಏಷ್ಯಾವನ್ನು ಸಂಪರ್ಕಿಸುವ ಸುಲಭ ಅಂತಾರಾಷ್ಟ್ರೀಯ ಸಣ್ಣ ಜಲಮಾರ್ಗ ಇದಾಗಿದೆ.
ಹೌತಿ ಉಗ್ರರ ದಾಳಿ ಏಕೆ:ಕೆಂಪು ಸಮುದ್ರದ ಮೇಲೆ ಹೌತಿ ಉಗ್ರರು ನಡೆಸುತ್ತಿರುವ ದಾಳಿಯು ಇಸ್ರೇಲ್- ಹಮಾಸ್ ಘರ್ಷಣೆಯೊಂದಿಗೆ ನಂಟು ಹೊಂದಿದೆ. ಹಮಾಸ್ ಉಗ್ರರಿಗೆ ನೆರವು ನೀಡುತ್ತಿರುವ ಇರಾನ್ ಭಾಗವಾಗಿದ್ದಾರೆ ಈ ಹೌತಿಗಳು. ಯೆಮೆನ್ ದೇಶದ ಅಸ್ತಿತ್ವದ ಕುರಿತು ಇರಾನ್ ಸೇರಿದಂತೆ ಪ್ರಮುಖ ಎಲ್ಲಾ ಗುಂಪುಗಳು ವಾದ ಮಂಡಿಸುತ್ತವೆ. ಇರಾನ್ ಸಾಂಕೇತಿಕವಾಗಿ ಪ್ಯಾಲೆಸ್ತೀನಿಯರನ್ನು ಬೆಂಬಲಿಸಿದರೂ, ಇದೀಗ ಅವರು ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿ ದಾಳಿ ಮಾಡುತ್ತಿದೆ. ಈ ಮೂಲಕ ಗಾಜಾದಲ್ಲಿ ಇಸ್ರೇಲ್ ಮಿಲಿಟರಿ ನಡೆಸುತ್ತಿರುವ ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ತಂತ್ರ ರೂಪಿಸಿದೆ. ಇದಕ್ಕಾಗಿ ಭೌಗೋಳಿಕ ರಾಜಕೀಯ ಪ್ರಭಾವ ಹೆಚ್ಚಿಸಲು ಕೆಂಪು ಸಮುದ್ರದಲ್ಲಿ ಹೌತಿಗಳು ದಾಳಿಗೆ ಮುಂದಾಗಿದ್ದಾರೆ.
ಇಲ್ಲಿಯವರೆಗಿನ ಘರ್ಷಣೆ: ಅಮೆರಿಕದ ರಕ್ಷಣಾ ಇಲಾಖೆ ಪ್ರಕಾರ, ಹೌತಿ ಉಗ್ರರು 35ಕ್ಕೂ ವಿವಿಧ ದೇಶಗಳ 100ಕ್ಕೆ ಹೆಚ್ಚು ವ್ಯಾಪಾರಿ ಹಡಗುಗಳ ಮೇಲೆ ವೈಮಾನಿಕ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ ನಡೆಸಿದ್ದಾರೆ. ಕಳೆದ ನಾಲ್ಕು ವಾರದಲ್ಲಿ 13 ವಾಣಿಜ್ಯ ಹಡಗುಗಳ ಮೇಲೆ ದಾಳಿ ನಡೆಸಿದ್ದಾರೆ. ಅಷ್ಟೇ ಅಲ್ಲದೇ, ಯೆಮೆನ್ನಲ್ಲೂ 25 ಎಂವಿ ಗ್ಯಾಲಕ್ಸಿ ನಾಯಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಈ ಬಂಡುಕೋರರು ಇಸ್ರೇಲ್ಗೆ ಹೋಗುವ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಆದರೆ, ಡಿಸೆಂಬರ್ 11ರಂದು ನಾರ್ವೇಜಿಯಮನ್ ಸ್ಟ್ರಿಂಡಾ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದಾರೆ. ಇದಾದ ಬಳಿಕ ಡಿಸೆಂಬರ್ 15ರಂದು ಹೌತಿ ದಾಳಿಯು ಜಾಗತಿಕವಾಗಿ ಕಳವಳ ಮೂಡಿಸಿದೆ.
ಸಮುದ್ರ ವ್ಯಾಪಾರದ ಪ್ರಮುಖ ಮಾರ್ಗ: ಕೆಂಪು ಸಮುದ್ರದ ಮೇಲೆ ಇದೀಗ ಹೌತಿ ಉಗ್ರರು ನಡೆಸುತ್ತಿರುವ ದಾಳಿ ಅಂತಾರಾಷ್ಟ್ರೀಯ ಸಮುದ್ರ ವ್ಯಾಪಾರಕ್ಕೆ ಆತಂಕ ಮೂಡಿಸಿದೆ. ಕೆಂಪು ಸಮುದ್ರದ ಮೂಲಕ ನೌಕೆಗಳು ಸೂಯೆಜ್ ಕಾಲುವೆ ಸೇರಬೇಕು. ಪೂರ್ವ ಮತ್ತು ಪಶ್ಚಿಮದ ನಡುವಿನ ಪ್ರಮುಖ ವ್ಯಾಪಾರಕ್ಕೆ ಸೂಯೆಜ್ ಕಾಲುವೆ ನೇರ ಮಾರ್ಗವಾಗಿದೆ. ಇದು ಕಡಿಮೆ ವೆಚ್ಚದಾಯಕ ಮಾರ್ಗವೂ ಆಗಿದೆ. ಈ ದಕ್ಷಿಣ ಕೆಂಪು ಸಮುದ್ರದ ಮಾರ್ಗದಲ್ಲಿ 400 ವಾಣಿಜ್ಯ ಹಡಗುಗಳು ಸಂಚಾರ ಮಾಡುತ್ತದೆ. ಇದಕ್ಕೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ. ಜಾಗತಿಕ ವ್ಯಾಪಾರದ ಶೇ. 12ರಷ್ಟು ತೈಲದ ಶೇ. 10ರಷ್ಟು ಕಂಟೈನರ್ಗಳ ಚಲನವಲನ ಇಲ್ಲಿ ನಡೆಯುತ್ತದೆ.
ಕೆಂಪು ಸಮುದ್ರದಲ್ಲಿ ಸಂಚರಿಸುತ್ತಿರುವ ಅನೇಕ ನೌಕೆಗಳ ಮೇಲೆ ಹೌತಿ ಉಗ್ರರು ನಿರಂತರ ದಾಳಿಗೆ ಮುಂದಾಗಿದ್ದಾರೆ. ಇದರಿಂದ ಪ್ರಮುಖ ಹಡಗು ಕಂಪನಿಗಳಾದ ಎಂಎಸ್ಸಿ, ಸಿಎಂಎ, ಸಿಜಿಎಂ, ಹಪಗ್ ಲೊಯ್ಡ್ ಮತ್ತು ಎಪಿ ಮೊಲರ್ ಮರ್ಸ್ಕ್ ಕಳೆದೊಂದು ವಾರದಿಂದ ಬಾಬ್ ಎಲ್ ಮಾಂಡೆಬ್ ಜಲಸಂಧಿ ಮಾರ್ಗ ಸಂಚಾರವನ್ನು ನಿಲ್ಲಿಸಿದೆ. ಇದೀಗ ಅವರು ಬದಲಿ ಮಾರ್ಗವಾಗಿ ಕೇಪ್ ಆಫ್ ಗುಡ್ ಹೋಪ್ ಮೂಲಕ ಸಂಚಾರಕ್ಕೆ ಮುಂದಾಗಿದ್ದು, ಈ ಮೂಲಕ ಸುರಕ್ಷತೆ ಕಾಯ್ದುಕೊಳ್ಳಲು ನಿರ್ಧರಿಸಿದೆ. ಇದರಿಂದ ಹಡಗಿನ ಸಂಚಾರದಲ್ಲಿ 19ರಿಂದ 30 ದಿನಗಳು ವಿಳಂಬ ಆಗುತ್ತದೆ. ಇದರ ಜೊತೆಗೆ ವಿಮಾ ಕಂಪನಿಗಳು ಈ ಸಾಗಣೆ ಮಾರ್ಗವನ್ನು ಸರಿದೂಗಿಸಿಲ್ಲ ಹಾಗೂ ಯುದ್ಧ ಅಪಾಯದ ಹಿನ್ನೆಲೆ 5,200 ಡಾಲರ್ ಹೆಚ್ಚುವರಿ ಶುಲ್ಕ ವಿಧಿಸುತ್ತಿವೆ.