ವಾಷಿಂಗ್ಟನ್:ವಾಷಿಂಗ್ಟನ್ ಡಿಸಿಯಲ್ಲಿ ಬುಧವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ. ಪೊಲೀಸರನ್ನು ನಾರ್ತ್ ಕ್ಯಾಪಿಟಲ್ ಮತ್ತು ಓ ಸ್ಟ್ರೀಟ್ನಲ್ಲಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಗುಂಡೇಟಿನಿಂದ ಗಾಯಗೊಂಡಿದ್ದ ಇಬ್ಬರನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ವಾಷಿಂಗ್ಟನ್ ಡಿಸಿಯಲ್ಲಿ ಗುಂಡಿನ ಮೊರೆತ.. ದಾಳಿಯಲ್ಲಿ ಇಬ್ಬರ ಸಾವು, ಮೂವರಿಗೆ ಗಾಯ - ನಾರ್ತ್ ಕ್ಯಾಪಿಟಲ್ ಮತ್ತು ಓ ಸ್ಟ್ರೀಟ್
ಕಟ್ಟಡದ ಮುಂದೆ ಸಣ್ಣ, ಕಪ್ಪು SUV ಯಿಂದ ಶಂಕಿತರು ಪರಾರಿಯಾಗಿದ್ದಾರೆ. ಇವರು ಇಲ್ಲಿಂದ ಕಾಲ್ಕೀಳುವ ಮುನ್ನ ರಸ್ತೆಯಲ್ಲಿರುವ ಜನರ ಮೇಲೆ ಅರೆ-ಸ್ವಯಂಚಾಲಿತ ಬಂದೂಕುಗಳಿಂದ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಆರಂಭಿಕ ತನಿಖೆಯ ವೇಳೆ ತಿಳಿದು ಬಂದಿದೆ.
Two dead three injured in Washington DC shooting
ಘಟನೆಯಲ್ಲಿ ಗಾಯಗೊಂಡ ಮೂವರನ್ನು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಶಂಕಿತರು ಕಟ್ಟಡದ ಮುಂದೆ ಸಣ್ಣ, ಕಪ್ಪು SUV ಯಿಂದ ಪರಾರಿಯಾಗಿದ್ದಾರೆ. ಇವರು ಇಲ್ಲಿಂದ ಕಾಲ್ಕೀಳುವ ಮುನ್ನ ರಸ್ತೆಯಲ್ಲಿರುವ ಜನರ ಮೇಲೆ ಅರೆ-ಸ್ವಯಂಚಾಲಿತ ಬಂದೂಕುಗಳಿಂದ ಗುಂಡು ಹಾರಿಸಲು ಪ್ರಾರಂಭಿಸಿದರು ಎಂದು ಆರಂಭಿಕ ತನಿಖೆಯ ವೇಳೆ ತಿಳಿದು ಬಂದಿದೆ.
ಇದನ್ನು ಓದಿ:ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧಕ್ಕೆ 6 ತಿಂಗಳು.. ವಿಶ್ವದ ಆರ್ಥಿಕ ಮಟ್ಟ ಕುಸಿತ