ಕರ್ನಾಟಕ

karnataka

ETV Bharat / international

ತೈವಾನ್ ಗಡಿ ತಲುಪಿದ ಚೀನಾ ಯುದ್ಧ ನೌಕೆಗಳು: ಆತಂಕದಲ್ಲಿ ದ್ವೀಪರಾಷ್ಟ್ರ - ತೈವಾನ್ ಗಡಿ ತಲುಪಿದ ಚೀನಾ ಯುದ್ಧ ನೌಕೆಗಳು

ತೈವಾನ್ ವಿರುದ್ಧ ಚೀನಾ ಸೇನೆ ಮತ್ತಷ್ಟು ಉಗ್ರವಾಗಿ ಮಿಲಿಟರಿ ಡ್ರಿಲ್ ಆರಂಭಿಸಿದ್ದು, ಯಾವ ಕ್ಷಣದಲ್ಲಾದರೂ ದಾಳಿ ಮಾಡುವ ಸಾಧ್ಯತೆಗಳು ಗೋಚರಿಸುತ್ತಿವೆ. ತೈವಾನ್ ಗಡಿಯಲ್ಲಿ ಚೀನಾ ದಿನದಿಂದ ದಿನಕ್ಕೆ ತನ್ನ ಸೇನಾಪಡೆಗಳ ಸಂಖ್ಯೆಯನ್ನು ಹೆಚ್ಚಿಸುತ್ತಿದೆ.

ತೈವಾನ್ ಗಡಿ ತಲುಪಿದ ಚೀನಾ ಯುದ್ಧ ನೌಕೆಗಳು: ಆತಂಕದಲ್ಲಿ ದ್ವೀಪರಾಷ್ಟ್ರ
Warships reach Taiwan border: China backs out of climate change talks

By

Published : Aug 6, 2022, 11:16 AM IST

ತೈಪೇಯಿ: ಚೀನಾ ಸೇನೆ ತನ್ನ ಮುಖ್ಯ ದ್ವೀಪವೊಂದರ ಮೇಲೆ ದಾಳಿ ನಡೆಸುವ ಕವಾಯತುಗಳನ್ನು ನಡೆಸುತ್ತಿದೆ ಎಂದು ತೈವಾನ್ ಆರೋಪಿಸಿದೆ. ಅಮೆರಿಕ ಜನಪ್ರತಿನಿಧಿ ಸಭೆಯ ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರು ತೈವಾನ್​ಗೆ ಭೇಟಿ ನೀಡಿದ ನಂತರ ಆಕ್ರೋಶಗೊಂಡ ಚೀನಾ ತೈವಾನ್ ಸುತ್ತುವರಿದು ಮಿಲಿಟರಿ ಡ್ರಿಲ್ ನಡೆಸುತ್ತಿದೆ. ಸದ್ಯ ಈ ಡ್ರಿಲ್​ಗಳ ಮಟ್ಟವನ್ನು ಚೀನಾ ದ್ವಿಗುಣಗೊಳಿಸಿದೆ.

ಚೀನಾದ ನೆರೆಯಲ್ಲಿರುವ ತೈವಾನ್ ಸ್ವತಂತ್ರ ದೇಶವಾಗಿದೆ. ಆದರೆ ತೈವಾನ್ ತನ್ನ ದೇಶದ ಭಾಗವೆಂದು ಚೀನಾ ವಾದಿಸುತ್ತದೆ. ಈ ಮಧ್ಯೆ ಪೆಲೋಸಿ ಅವರು ತೈವಾನ್​ಗೆ ಭೇಟಿ ನೀಡಿದ್ದರಿಂದ ಎರಡೂ ರಾಷ್ಟ್ರಗಳ ಮಧ್ಯದ ವಿರಸ ಮತ್ತಷ್ಟು ಹೆಚ್ಚಾಗಿದೆ. ಚೀನಾ ಮತ್ತು ತೈವಾನ್​ ನಡುವಿನ ಉದ್ವಿಗ್ನತೆಯನ್ನು ಶಮನಗೊಳಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವಂತೆ ವಿಶ್ವಸಂಸ್ಥೆ ಒತ್ತಾಯಿಸಿದೆ.

ಈ ಬಿಕ್ಕಟ್ಟಿನಿಂದ ಶುಕ್ರವಾರ ಹೊಸದೊಂದು ಸಮಸ್ಯೆ ಶುರುವಾಗಿದೆ. ಪ್ರಮುಖವಾಗಿ ಹವಾಮಾನ ಬದಲಾವಣೆ ಮತ್ತು ರಕ್ಷಣಾ ಸಹಕಾರ ವಿಷಯಗಳಲ್ಲಿ ವಾಶಿಂಗ್ಟನ್​ನೊಂದಿಗೆ ಮಾಡಿಕೊಳ್ಳಲಾದ ಸಹಕಾರ ಒಪ್ಪಂದಗಳಿಂದ ಹಿಂದೆ ಸರಿಯುವುದಾಗಿ ಹಾಗೂ ಮುಂಬರುವ ಮಾತುಕತೆಗಳ ಸರಣಿಯನ್ನು ಬಹಿಷ್ಕರಿಸುವುದಾಗಿ ಚೀನಾ ಹೇಳಿದೆ.

ಅಮೆರಿಕಕ್ಕೆ ಚೀನಾ ಎಚ್ಚರಿಕೆ, ಒಪ್ಪಂದ ಮುರಿದುಕೊಳ್ಳಲು ಡ್ರ್ಯಾಗನ್​ ಚಿಂತನೆ:ಜಗತ್ತಿನ ಅತಿ ದೊಡ್ಡ ಮಾಲಿನ್ಯಕಾರಕ ದೇಶಗಳಾದ ಚೀನಾ ಮತ್ತು ಅಮೆರಿಕ, ಈ ದಶಕದಲ್ಲಿ ಹವಾಮಾನ ಬದಲಾವಣೆ ಕಾರ್ಯಸೂಚಿಯನ್ನು ವೇಗವಾಗಿ ಜಾರಿಗೊಳಿಸುವುದು ಮತ್ತು ಸಮಸ್ಯೆಯ ಪರಿಹಾರಕ್ಕೆ ಯತ್ನಿಸುವುದಾಗಿ ವಾಗ್ದಾನ ಮಾಡಿದ್ದವು. ಆದರೆ, ಈಗ ಆ ಒಪ್ಪಂದವು ಮುರಿದು ಬೀಳುವ ಸಾಧ್ಯತೆಯಿದೆ. ತೈವಾನ್ ಸುತ್ತಮುತ್ತ ಚೀನಾ ಇತಿಹಾಸದಲ್ಲೇ ತನ್ನ ಅತಿ ದೊಡ್ಡ ಸೇನಾ ಡ್ರಿಲ್ ನಡೆಸಿದೆ. ಆರಂಭದಲ್ಲಿ ತೈವಾನ್​ಗೆ ಹೋಗುವ ಎಲ್ಲ ಮಾರ್ಗಗಳನ್ನು ಬಂದ್​ ಮಾಡುವುದು ಹಾಗೂ ಅಂತಿಮವಾಗಿ ದ್ವೀಪರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಚೀನಾದ ಯುದ್ಧತಂತ್ರವಾಗಿದೆ.

ಚೀನಾದ ಹಲವಾರು ವಿಮಾನ ಮತ್ತು ಹಡಗುಗಳು ತೈವಾನ್​ ಕೊಲ್ಲಿಯ ಬಳಿ ಸುಳಿದಾಡುತ್ತಿವೆ ಮತ್ತು ಸದ್ಯದಲ್ಲೇ ತನ್ನ ಮೇಲೆ ದಾಳಿ ಮಾಡಲು ಈ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದು ತೈವಾನ್ ಹೇಳಿದೆ.

ತೈವಾನ್ ಗಡಿಗೆ ತನ್ನ ಸೇನಾಪಡೆಗಳು ಎಷ್ಟು ಹತ್ತಿರದಲ್ಲಿವೆ ಎಂಬುದನ್ನು ತೋರಿಸುವ ಸಲುವಾಗಿ ಬೀಜಿಂಗ್ ಮಧ್ಯರಾತ್ರಿ ವೀಡಿಯೊ ಒಂದನ್ನು ಬಿಡುಗಡೆ ಮಾಡಿದೆ. ಏರ್ ಫೋರ್ಸ್​ ಪೈಲಟ್ ಒಬ್ಬಾತ ತನ್ನ ಕಾಕ್​ ಪಿಟ್​ನಲ್ಲಿ ಕುಳಿತು ತೈವಾನ್​ನ ಕರಾವಳಿ ಮತ್ತು ಬೆಟ್ಟಗುಡ್ಡಗಳ ಚಿತ್ರೀಕರಣ ಮಾಡುತ್ತಿರುವುದು ಇದರಲ್ಲಿ ಕಾಣಿಸುತ್ತದೆ.

ಹಳದಿ ಸಮುದ್ರದ ದಕ್ಷಿಣ ಭಾಗದಲ್ಲಿ ಲೈವ್ ಫೈರ್ ಡ್ರಿಲ್ ಆರಂಭಿಸುವುದಾಗಿ ಮತ್ತು ಈ ಡ್ರಿಲ್ ಶನಿವಾರದಿಂದ ಆಗಸ್ಟ್​ 15ರವರೆಗೆ ನಡೆಯಲಿದೆ ಎಂದು ಚೀನಾ ತಿಳಿಸಿದೆ. ಈ ಜಾಗವು ಚೀನಾ ಮತ್ತು ಕೊರಿಯಾ ಉಪದ್ವೀಪದಲ್ಲಿದೆ.

ಇದನ್ನು ಓದಿ:ಇಸ್ರೇಲ್​ - ಗಾಜಾ ನಡುವೆ ದಾಳಿ - ಪ್ರತಿದಾಳಿ.. ಹಮಾಸ್ ಕಮಾಂಡರ್ ಸೇರಿ 10 ಜನರ ಸಾವು

ABOUT THE AUTHOR

...view details