ಕೊಲಂಬೊ: ಹಿಂದೆಂದೂ ಕಾಣದಂಥ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿರುವ ಮಧ್ಯದಲ್ಲೇ ದೇಶಕ್ಕೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ಇಂದು ಚುನಾವಣೆ ನಿಗದಿಯಾಗಿದ್ದು ಮತದಾನ ನಡೆಯುತ್ತಿದೆ. ಹಿಂದಿನ ಅಧ್ಯಕ್ಷ ಗೊಟಬಯ ರಾಜಪಕ್ಸ ರಾಜೀನಾಮೆ ನೀಡಿದ ನಂತರ ಹಂಗಾಮಿ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿಗಿ ಭದ್ರತೆಯಲ್ಲಿ ಶ್ರೀಲಂಕಾ ಹೊಸ ಅಧ್ಯಕ್ಷರ ಆಯ್ಕೆಗೆ ಮತದಾನ - ಅಧ್ಯಕ್ಷ ಗೊಟಬಯಾ ರಾಜಪಕ್ಷೆ ರಾಜೀನಾಮೆ
ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಸಂಸದರಾದ ಡಲ್ಲಾಸ್ ಅಲಹೆಪ್ಪುರುಮಾ ಮತ್ತು ಅನುರಾ ಕುಮಾರಾ ಡಿಸ್ಸನಾಯಕೆ ಶ್ರೀಲಂಕಾದ ಅಧ್ಯಕ್ಷ ಹುದ್ದೆಯ ರೇಸ್ನಲ್ಲಿದ್ದಾರೆ.
ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಸಂಸದರಾದ ಡಲ್ಲಾಸ್ ಅಲಹೆಪ್ಪುರುಮಾ ಮತ್ತು ಅನುರಾ ಕುಮಾರಾ ಡಿಸ್ಸನಾಯಕೆ ಶ್ರೀಲಂಕಾದ ಅಧ್ಯಕ್ಷ ಹುದ್ದೆಯ ರೇಸ್ನಲ್ಲಿದ್ದಾರೆ. ದ್ವೀಪರಾಷ್ಟ್ರದ 9ನೇ ಅಧ್ಯಕ್ಷರ ಆಯ್ಕೆಗೆ ಇದೀಗ ಮತದಾನ ಪ್ರಗತಿಯಲ್ಲಿದೆ.
ಪ್ರತಿಪಕ್ಷಗಳ ಮುಖಂಡ ಸಜಿತ್ ಪ್ರೇಮದಾಸ ರಾಷ್ಟ್ರಪತಿ ಚುನಾವಣೆಯ ಕಣದಿಂದ ಈಗಾಗಲೇ ಹಿಂದೆ ಸರಿದಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ಇಂದು ಸದನದೊಳಗೆ ಮೊಬೈಲ್ ಫೋನ್ ತರಲು ಯಾವುದೇ ಸಂಸದರಿಗೆ ಅವಕಾಶವಿಲ್ಲ ಎಂದು ಸ್ಪೀಕರ್ ಹೇಳಿದ್ದಾರೆ. ನಿನ್ನೆ, ಕೆಲವು ಪಕ್ಷದ ನಾಯಕರು ರಹಸ್ಯ ಮತದಾನದಲ್ಲಿ ಅಡ್ಡ ಮತದಾನವನ್ನು ಪರಿಶೀಲಿಸಲು ತಮ್ಮ ಮತಪತ್ರಗಳ ಚಿತ್ರ ಸೆರೆಹಿಡಿಯುವಂತೆ ತಮ್ಮ ಸಂಸದರನ್ನು ಕೇಳಿಕೊಂಡಿದ್ದರು.